ADVERTISEMENT

ಮಹಿಳಾ ಕ್ರಿಕೆಟ್: ಆಸ್ಟ್ರೇಲಿಯಾಗೆ ಮಣಿದ ಭಾರತದ ವನಿತೆಯರು

ಪಿಟಿಐ
Published 14 ಸೆಪ್ಟೆಂಬರ್ 2025, 19:01 IST
Last Updated 14 ಸೆಪ್ಟೆಂಬರ್ 2025, 19:01 IST
<div class="paragraphs"><p>ಆಸ್ಟ್ರೇಲಿಯಾದ ಬ್ಯಾಟರ್ ಫೋಬಿ ಲಿಚ್‌ಫೀಲ್ಡ್‌&nbsp;</p></div>

ಆಸ್ಟ್ರೇಲಿಯಾದ ಬ್ಯಾಟರ್ ಫೋಬಿ ಲಿಚ್‌ಫೀಲ್ಡ್‌ 

   

 –ಪಿಟಿಐ ಚಿತ್ರ

ಮುಲ್ಲನಪುರ: ನಾಲ್ಕು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ ಭಾರತ ಮಹಿಳಾ ತಂಡದ ಫೀಲ್ಡರ್‌ಗಳು ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಪಂದ್ಯದ ಜಯವನ್ನೂ ಮಣ್ಣುಪಾಲು ಮಾಡಿದರು. 

ADVERTISEMENT

ಇದರಿಂದಾಗಿ ಚೆಂದದ ಅರ್ಧಶತಕಗಳನ್ನು ಗಳಿಸಿದ ಫೋಬಿ ಲಿಚ್‌ಫೀಲ್ಡ್‌ , ಬೆತ್ ಮೂನಿ ಮತ್ತು ಅನಾಬೆಲ್ ಸದರ್ಲೆಂಡ್ ಅವರು ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್‌ ಜಯದ ಕಾಣಿಕೆ ನೀಡಿದರು. ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 44.1 ಓವರ್‌ಗಳಲ್ಲಿ 281 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಆರಂಭಿಕ ಬ್ಯಾಟರ್ ಪ್ರತಿಕಾ ರಾವಳ್ (64; 96ಎ, 4X6), ಸ್ಮೃತಿ ಮಂದಾನ (58; 63ಎ, 4X6, 6X2) ಹಾಗೂ ಹರ್ಲಿನ್ ಡಿಯೊಲ್ (54; 57ಎ, 4X4, 6X2) ಅವರು ಅರ್ಧಶತಕ ಗಳಿಸಿದರು. 

ಅದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡವು 44.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 282 ರನ್ ಗಳಿಸಿತು. ಲಿಚ್‌ಫೀಲ್ಡ್‌ (88; 80ಎ) ಅವರ ಎರಡು ಕ್ಯಾಚ್ ಹಾಗೂ  ಮೂನಿ (ಅಜೇಯ 77; 74ಎ) ಮತ್ತು ಎಲೀಸ್ ಪೆರಿ (30 ರನ್) ಅವರ ತಲಾ ಒಂದು ಕ್ಯಾಚ್‌ ಅನ್ನು ಫೀಲ್ಡರ್‌ಗಳು ಕೈಚೆಲ್ಲಿದರು. 

ಸಂಕ್ಷಿಪ್ತ ಸ್ಕೋರು

ಭಾರತ: 50 ಓವರ್‌ಗಳಲ್ಲಿ 7ಕ್ಕೆ281 (ಪ್ರತೀಕಾ ರಾವಳ್ 64, ಸ್ಮೃತಿ ಮಂದಾನ 58, ಹರ್ಲೀನ್ ಡಿಯೊಲ್ 54, ರಿಚಾ ಘೋಷ್ 25, ದೀಪ್ತಿ ಶರ್ಮಾ ಔಟಾಗದೇ 20, ಮೇಗನ್ ಶುಟ್ 45ಕ್ಕೆ2)

ಆಸ್ಟ್ರೇಲಿಯಾ: 44.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 282 (ಅಲಿಸಾ ಹೀಲಿ 27, ಫೊಬಿ ಲಿಚ್‌ಫೀಲ್ಡ್ 88, ಎಲೀಸ್ ಪೆರಿ 30, ಬೆತ್ ಮೂನಿ ಔಟಾಗದೇ 77, ಅನಾಬೆಲ್ ಸದರ್ಲೆಂಡ್ 54, ಕ್ರಾಂತಿ ಗೌಡ 55ಕ್ಕೆ1, ಸ್ನೇಹ ರಾಣಾ 51ಕ್ಕೆ1)

ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.