ADVERTISEMENT

INDW vs SLW: ಹರ್ಮನ್‌ ಪಡೆಗೆ ಲಂಕಾ ಸವಾಲು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 0:00 IST
Last Updated 21 ಡಿಸೆಂಬರ್ 2025, 0:00 IST
ಹರ್ಮನ್‌ಪ್ರೀತ್‌ ಕೌರ್‌
ಹರ್ಮನ್‌ಪ್ರೀತ್‌ ಕೌರ್‌   

ವಿಶಾಖಪಟ್ಟಣ: ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಮಹಿಳೆಯರ ತಂಡವು ಭಾನುವಾರ ಇಲ್ಲಿ ಆರಂಭವಾಗುವ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿದೆ.

ಸರಣಿಯ ಮೊದಲೆರಡು ಪಂದ್ಯಗಳು ವಿಶಾಖಪಟ್ಟಣದಲ್ಲಿ ನಡೆಯಲಿವೆ. ನಂತರದ ಮೂರು ಪಂದ್ಯಗಳು ತಿರುವನಂತಪುರದಲ್ಲಿ ಆಯೋಜನೆಯಾಗಿವೆ. ಇಂಗ್ಲೆಂಡ್‌ ಆತಿಥ್ಯದಲ್ಲಿ 2026ರ ಜೂನ್‌ ಮತ್ತು ಜುಲೈನಲ್ಲಿ ಮಹಿಳೆಯರ ಟಿ20 ವಿಶ್ವಕಪ್‌ ನಡೆಯಲಿದ್ದು, ಈ ನಿಟ್ಟಿನಲ್ಲಿ ಸ್ಥಿರ ಪ್ರದರ್ಶನ ನೀಡುವ ಒತ್ತಡ ಭಾರತದ ಆಟಗಾರ್ತಿಯರ ಮೇಲಿದೆ.

ಭಾರತ ತಂಡದಲ್ಲಿ ಅನುಭವಿಗಳೊಂದಿಗೆ ಉದಯೋನ್ಮುಖ ಆಟಗಾರ್ತಿಯರು ಇದ್ದಾರೆ. ಏಕದಿನ ವಿಶ್ವಕಪ್‌ ಗೆದ್ದ ತಂಡದಲ್ಲಿದ್ದ ಹರ್ಮನ್‌ಪ್ರೀತ್‌, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ರೇಣುಕಾ ಸಿಂಗ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಅವರು ಇದೇ ಮೊದಲ ಬಾರಿ ತಂಡದಲ್ಲಿ ಸ್ಥಾನ ಗಳಿಸಿದ್ದು, ಅವದ ಪ್ರದರ್ಶವನ್ನು ಚಿಂತಕರ ಚಾವಡಿ ಸೂಕ್ಷ್ಮವಾಗಿ ಗಮನಿಸಲಿದೆ. 

ADVERTISEMENT

ಅನುಭವಿ ಚಾಮರಿ ಅಟಪಟ್ಟು ನೇತೃತ್ವದ ಶ್ರೀಲಂಕಾ ತಂಡವು ಆತಿಥೇಯರಿಗೆ ಪ್ರಬಲ ಸವಾಲೊಡ್ಡುವ ವಿಶ್ವಾಸದಲ್ಲಿದೆ.  

‌ಪಂದ್ಯ ಆರಂಭ: ರಾತ್ರಿ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.