
ಭಾರತ ಮಹಿಳಾ ಕ್ರಿಕೆಟ್ ತಂಡ
ಚಿತ್ರ: ಬಿಸಿಸಿಐ
ನವದೆಹಲಿ: ಬಾಂಗ್ಲಾದೇಶ ವಿರುದ್ಧ ಮುಂದಿನ ತಿಂಗಳು ಭಾರತ ಮಹಿಳಾ ತಂಡವು ಆಡಬೇಕಾಗಿದ್ದ ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಕ್ಕೆ ಹಾಕಿದೆ. ಇದೇ ಅವಧಿಯಲ್ಲಿ ವಿಶ್ವ ಚಾಂಪಿಯನ್ ತಂಡಕ್ಕೆ ಬೇರೊಂದು ಸರಣಿ ಆಯೋಜಿಸಲು ಮಂಡಳಿ ಯೋಚಿಸುತ್ತಿದೆ.
ಐಸಿಸಿ ಫ್ಯೂಚರ್ ಟೂರ್ಸ್ ಕಾರ್ಯಕ್ರಮದ ಭಾಗವಾಗಿ ಭಾರತ ಮಹಿಳಾ ತಂಡವು ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ನೆರೆಯ ರಾಷ್ಟ್ರದ ವಿರುದ್ಧ ಆಡಬೇಕಾಗಿತ್ತು. ಪಂದ್ಯಗಳನ್ನು ಕೋಲ್ಕತ್ತ ಮತ್ತು ಕಟಕ್‌ನಲ್ಲಿ ಆಡಿಸುವ ನಿರೀಕ್ಷೆಯಿತ್ತು.
‘ಡಿಸೆಂಬರ್‌ನಲ್ಲಿ ಈ ಸರಣಿಗೆ ಪರ್ಯಾಯವಾಗಿ ಬೇರೊಂದು ಸರಣಿ ಏರ್ಪಾಡು ಮಾಡಲು ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಬಾಂಗ್ಲಾದೇಶ ವಿರುದ್ಧ ಸರಣಿಗೆ ಸಂಬಂಧಿಸಿ ನಾವು ಮುಂದುವರಿಯುವುದಿಲ್ಲ’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಆದರೆ ವಿವರಗಳನ್ನು ನೀಡಿಲ್ಲ.
ಪ್ರಸ್ತುತ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲದಿರುವುದು ಸರಣಿ ಮುಂದೂಡಲು ಕಾರಣ ಎನ್ನಲಾಗುತ್ತಿದೆ.
ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ ಮೊದಲ ತಮ್ಮ ಎದುರಾಳಿ ಯಾರೆಂಬುದಕ್ಕೆ ಭಾರತ ಮಹಿಳಾ ತಂಡ ಕಾಯುವಂತಾಗಿದೆ. ಡಬ್ಲ್ಯುಪಿಎಲ್ ನಂತರ ಭಾರತ ವನಿತೆಯರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಮೂರೂ ಮಾದರಿಯ ಸರಣಿಗಳಲ್ಲಿ ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.