ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶ್ರೇಯಸ್ ಗೋಪಾಲ್‌

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 7:06 IST
Last Updated 28 ನವೆಂಬರ್ 2021, 7:06 IST
ನಿಖಿತಾ ಮತ್ತು ಶ್ರೇಯಸ್‌ ಗೋಪಾಲ್
ನಿಖಿತಾ ಮತ್ತು ಶ್ರೇಯಸ್‌ ಗೋಪಾಲ್   

ಬೆಂಗಳೂರು: ಭರವಸೆಯ ಕ್ರಿಕೆಟ್‌ ಆಟಗಾರ ಶ್ರೇಯಸ್ ಗೋಪಾಲ್‌ ಅವರು ಬಹುಕಾಲದ ಗೆಳತಿ ನಿಖಿತಾ ಅವರನ್ನು ಮದುವೆಯಾಗಿದ್ದಾರೆ.

ಈ ಬಗ್ಗೆ ಶ್ರೇಯಸ್‌ ಗೋಪಾಲ್‌ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ರಣಜಿ ಸೇರಿದಂತೆ ಐಪಿಎಲ್‌ನಲ್ಲಿ ಶ್ರೇಯಸ್‌ ಉತ್ತಮ ಸಾಧನೆ ತೋರಿದ್ದಾರೆ. ಅವರು ಆರ್‌ಸಿಬಿ, ರಾಜಸ್ತಾನ್‌ ರಾಯಲ್ಸ್‌ ಪ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಕೋವಿಡ್‌ ಪರಿಣಾಮ ಅವರು ಪೂರ್ಣ ಪ್ರಮಾಣದಲ್ಲಿ ಆಟವಾಡಿರಲಿಲ್ಲ.

ADVERTISEMENT

ಇದೀಗ ಗೆಳತಿ ನಿಖಿತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಆಪ್ತರು ಹಾಗೂ ಗೆಳೆಯರಷ್ಟೆ ಭಾಗವಹಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.