ADVERTISEMENT

ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವ ಹೆಚ್ಚಳ

ಪಿಟಿಐ
Published 5 ಸೆಪ್ಟೆಂಬರ್ 2025, 15:52 IST
Last Updated 5 ಸೆಪ್ಟೆಂಬರ್ 2025, 15:52 IST
   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪೋಷಾಕು ಪ್ರಾಯೋಜಕತ್ವವು ದುಬಾರಿಯಾಗಲಿದೆ. ದ್ವಿಪಕ್ಷೀಯ ಸರಣಿಗಳಲ್ಲಿ ಪಂದ್ಯವೊಂದಕ್ಕೆ ₹ 3.5 ಕೋಟಿ ಮತ್ತು ಬಹುರಾಷ್ಟ್ರಗಳ ಟೂರ್ನಿಯಲ್ಲಿ ಪ್ರತಿ ಪಂದ್ಯಕ್ಕೆ ₹ 1.5 ಕೋಟಿ ನಿಗದಿಯಾಗುವ ಸಾಧ್ಯತೆ ಇದೆ. 

ಪ್ರಸ್ತುತ  ಜೆರ್ಸಿ ಪ್ರಾಯೋಜಕತ್ವ ಮೌಲ್ಯವು  ₹ 3.17 ಕೋಟಿ ಮತ್ತು ₹ 1.12 ಕೋಟಿ  ಇದೆ.

ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಆಯೋಜಿತ ಟೂರ್ನಿಗಳಲ್ಲಿ ಈ ಪ್ರಾಯೋಜಕತ್ವ ಮೌಲ್ಯವು ಅನ್ವಯವಾಗಲಿದೆ. ಮುಂಬರುವ ಏಷ್ಯಾ ಕಪ್ ಟೂರ್ನಿಯ ನಂತರ ಜಾರಿಯಾಗುವ ಸಾಧ್ಯತೆ ಇದೆ. ಇದರಿಂದ ಬಿಸಿಸಿಐಗೆ ₹ 400 ಕೋಟಿ ಆದಾಯ ಬರುವ ನಿರೀಕ್ಷೆ ಇದೆ.

ADVERTISEMENT

ಈಚೆಗೆ ಕೇಂದ್ರ ಸರ್ಕಾರವು ಜಾರಿ ಮಾಡಿರುವ ಆನ್‌ಲೈನ್ ಗೇಮಿಂಗ್ ಕಾಯಿದೆಯಿಂದಾಗಿ ಬಿಸಿಸಿಐ ಡ್ರೀಮ್ ಇಲೆವನ್ ಪ್ರಾಯೋಜಕತ್ವ ಒಪ್ಪಂದವನ್ನು ರದ್ದು ಮಾಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.