ADVERTISEMENT

ಟಿ20 ವಿಶ್ವಕಪ್‌ ಟೂರ್ನಿ: ಅಮೆರಿಕ ತಂಡಕ್ಕೆ ಭಾರತ ಸಂಜಾತ ಮೊನಾಂಕ್‌ ನಾಯಕ

ಪಿಟಿಐ
Published 30 ಜನವರಿ 2026, 15:19 IST
Last Updated 30 ಜನವರಿ 2026, 15:19 IST
ಮೊನಾಂಕ್‌ ಪಟೇಲ್‌
ಮೊನಾಂಕ್‌ ಪಟೇಲ್‌   

ದುಬೈ: ಭಾರತ ಸಂಜಾತ ಮೊನಾಂಕ್‌ ಪಟೇಲ್‌ ಅವರು ಫೆ.7ರಂದು ಆರಂಭವಾಗುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 15 ಆಟಗಾರರ ಅಮೆರಿಕ ತಂಡವನ್ನು ಮುನ್ನಡೆಲಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕಣಕ್ಕಿಳಿದಿದ್ದ 10 ಆಟಗಾರರು ತಂಡದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ತಂಡದಲ್ಲಿರುವ ಬಹುತೇಕ ಆಟಗಾರರು ಭಾರತದ ಮೂಲದವರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ನಾಸ್ತುಷ್ ಪ್ರದೀಪ್ ಕೆಂಜಿಗೆ ಮತ್ತೆ ಅವಕಾಶ ಪಡೆದಿದ್ದಾರೆ. 

ಕಳೆದ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡವು ಪೂರ್ಣಸದಸ್ಯ ರಾಷ್ಟ್ರ ಪಾಕಿಸ್ತಾನವನ್ನು ಸೋಲಿಸಿ ಸೂಪರ್ ಎಂಟರ ಹಂತ ತಲುಪಿತ್ತು. ಮುಂಬೈನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ತಂಡವು ಹಾಲಿ ಚಾಂಪಿಯನ್ ಭಾರತ ತಂಡವನ್ನು ಎದುರಿಸಲಿದೆ. ಅಮೆರಿಕ, ಭಾರತ, ಪಾಕಿಸ್ತಾನ, ನಮೀಬಿಯಾ ಮತ್ತು ನೆದರ್ಲೆಂಡ್ಸ್‌ ತಂಡಗಳು ಎ ಗುಂಪಿನಲ್ಲಿವೆ. 

ADVERTISEMENT

ತಂಡ ಹೀಗಿದೆ:

ಮೊನಾಂಕ್‌ ಪಟೇಲ್‌ (ನಾಯಕ), ಜೆಸ್ಸಿ ಸಿಂಗ್‌ (ಉಪನಾಯಕ), ಆ್ಯಂಡ್ರೀಸ್‌ ಗೌಸ್‌, ಶೆಹನ್‌ ಜಯಸೂರ್ಯ, ಮಿಲಿಂಗ್‌ ಕುಮಾರ್‌, ಶಯನ್‌ ಜಹಂಗೀರ್‌, ಸಾಯಿತೇಜ ಎಂ, ಸಂಜಯ್‌ ಕೃಷ್ಣಮೂರ್ತಿ, ಹರ್ಮೀತ್‌ ಸಿಂಗ್‌, ನಾಸ್ತುಷ್ ಕೆಂಜಿಗೆ, ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರಾವಳ್ಕರ್, ಅಲಿ ಖಾನ್‌, ಮೊಹಮ್ಮದ್ ಮೊಹ್ಸಿನ್, ಶುಭಂ ರಂಜನೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.