ADVERTISEMENT

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಗೌಹರ್ ಸುಲ್ತಾನಾ

ಪಿಟಿಐ
Published 22 ಆಗಸ್ಟ್ 2025, 6:32 IST
Last Updated 22 ಆಗಸ್ಟ್ 2025, 6:32 IST
   

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಅನುಭವಿ ಎಡಗೈ ಸ್ಪಿನ್‌ ಬೌಲರ್‌ ಗೌಹರ್ ಸುಲ್ತಾನಾ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ನನಗೆ ‘ದೊಡ್ಡ ಗೌರವ’ ಎಂದು 37 ವರ್ಷದ ಆಟಗಾರ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

2008ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಗೌಹರ್ ಸುಲ್ತಾನಾ, ಭಾರತದ ಪರ 50 ಏಕದಿನ ಹಾಗೂ 37 ಟಿ–20 ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 66 ಹಾಗೂ 29 ವಿಕೆಟ್‌ ಪಡೆದಿದ್ದಾರೆ.

ADVERTISEMENT

2009 ಹಾಗೂ 2013ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸುಲ್ತಾನಾ ಅವರು ಭಾರತವನ್ನು ಪ್ರತಿನಿಧಿಸಿದ್ದು, 11 ಪಂದ್ಯಗಳಿಂದ 12 ವಿಕೆಟ್‌ ಪಡೆದಿದ್ದರು. 2009 ರಿಂದ 2014ರ ನಡುವಿನ ಮೂರು ಮಹಿಳಾ ಟಿ–20 ವಿಶ್ವಕಪ್‌ನಲ್ಲಿ ಕಣಕ್ಕಿಳಿದಿದ್ದು, ಏಳು ವಿಕೆಟ್‌ ಪಡೆದಿದ್ದಾರೆ.

ಕೊನೆಯ ಬಾರಿಗೆ ಸುಲ್ತಾನಾ ಅವರು 2014ರಲ್ಲಿ ಭಾರತದ ಪರ ಕಣಕ್ಕಿಳಿದಿದ್ದರು. 2024 ಹಾಗೂ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ(ಡಬ್ಲ್ಯೂಪಿಲ್‌) ಯುಪಿ ವಾರಿಯರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.