ADVERTISEMENT

ಇಂಗ್ಲೆಂಡ್ ಪ್ರವಾಸ: ಮಹಿಳಾ ಕ್ರಿಕೆಟ್ ತಂಡಕ್ಕೆ ಲಸಿಕೆ

ಪಿಟಿಐ
Published 28 ಮೇ 2021, 14:58 IST
Last Updated 28 ಮೇ 2021, 14:58 IST
ಲಸಿಕೆ ಹಾಕಿಸಿಕೊಂಡ ದೀಪ್ತಿ ಶರ್ಮಾ –ಟ್ವಿಟರ್ ಚಿತ್ರ
ಲಸಿಕೆ ಹಾಕಿಸಿಕೊಂಡ ದೀಪ್ತಿ ಶರ್ಮಾ –ಟ್ವಿಟರ್ ಚಿತ್ರ   

ನವದೆಹಲಿ: ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಶುಕ್ರವಾರ ಕೋವಿಡ್‌ ಲಸಿಕೆಯ ಮೊದಲ ಡೋಸ್ ಹಾಕಲಾಯಿತು.

ಸದ್ಯ ಮುಂಬೈಯಲ್ಲಿ ಕ್ವಾರಂಟೈನ್‌ನಲ್ಲಿರುವ ತಂಡದ ಇಂಗ್ಲೆಂಡ್ ಪ್ರವಾಸ ಜೂನ್ 16ರಿಂದ ಬ್ರಿಸ್ಟಲ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗಲಿದೆ. ನಂತರ ಎರಡು ಟಿ20 ಮತ್ತು ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ಕೆಲವು ಆಟಗಾರ್ತಿಯರು ಈಗಾಗಲೇ ಅವರಿದ್ದ ಸ್ಥಳಗಳಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಎಲ್ಲರಿಗೂ ಕೋವಿಶೀಲ್ಡ್ ಲಸಿಕೆ ಹಾಕಲಾಗಿದೆ. ಇಂಗ್ಲೆಂಡ್ ಆರೋಗ್ಯ ಇಲಾಖೆ ಎರಡನೇ ಡೋಸ್‌ಗೆ ವ್ಯವಸ್ಥೆ ಮಾಡಲಿದೆ ಎಂದು ಬಿಸಿಸಿಐ ತಿಳಿಸಿದೆ.

ADVERTISEMENT

‘ಸೂಜಿ ಚುಚ್ಚಿಸಿಕೊಳ್ಳಲು ಸ್ವಲ್ಪ ಭಯ. ಆದರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಾಗ ಆತಂಕವಾಗಲಿಲ್ಲ. ಎಲ್ಲರೂ ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ’ ಎಂದು ಸ್ಪಿನ್ ಆಲ್‌ರೌಂಡರ್ ದೀಪ್ತಿ ಶರ್ಮಾ ಗುರುವಾರ ಟ್ವೀಟ್ ಮಾಡಿದ್ದರು.

ಭಾರತ ಮಹಿಳೆಯರ ಮತ್ತು ಪುರುಷರ ತಂಡ ಜೂನ್ ಎರಡರಂದು ವಿಶೇಷ ವಿಮಾನದಲ್ಲಿ ಇಂಗ್ಲೆಂಡ್‌ಗೆ ತೆರಳಲಿದೆ. ನಾಯಕ ವಿರಾಟ್ ಕೊಹ್ಲಿ ಒಳಗೊಂಡಂತೆ ಪುರುಷರ ತಂಡದ ಅನೇಕರು ಈಗಾಗಲೇ ಮೊದಲ ಡೋಸ್ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.