ವಡೋದರ: ನಾಯಕಿ ಮಿತಾಲಿ ರಾಜ್ (66; 82ಎ, 8ಬೌಂ) ಮತ್ತು ಪೂನಮ್ ರಾವುತ್ (65; 92ಎ, 7ಬೌಂ) ಅವರ ಅಮೋಘ ಜೊತೆಯಾಟದ ಬಲದಿಂದ ಭಾರತ ಮಹಿಳಾ ತಂಡದವರು ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ಗಳಿಂದ ಗೆದ್ದಿದ್ದಾರೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿದ್ದಾರೆ.
ರಿಲಯನ್ಸ್ ಮೈದಾನದಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿದ ಸ್ಯೂನ್ ಲುಸ್ ಸಾರಥ್ಯದ ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 6 ವಿಕೆಟ್ಗೆ 247ರನ್ ದಾಖಲಿಸಿತು.
ಸವಾಲಿನ ಗುರಿಯನ್ನು ಮಿತಾಲಿ ಬಳಗ 48 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಮುಟ್ಟಿತು.
ಗುರಿ ಬೆನ್ನಟ್ಟಿದ ಭಾರತ 66ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಒಂದಾದ ಮಿತಾಲಿ ಮತ್ತು ಪೂನಮ್ ದಿಟ್ಟ ಇನಿಂಗ್ಸ್ ಕಟ್ಟಿದರು. ಇವರು ಮೂರನೇ ವಿಕೆಟ್ಗೆ 129ರನ್ ಸೇರಿಸಿದರು. ಒಂದು ರನ್ ಅಂತರದಲ್ಲಿ ಈ ಜೋಡಿ ಪೆವಿಲಿಯನ್ ಸೇರಿತು. ಬಳಿಕ ಹರ್ಮನ್ಪ್ರೀತ್ ಕೌರ್ (ಔಟಾಗದೆ 39; 27ಎ, 5ಬೌಂ, 1ಸಿ) ವೇಗವಾಗಿ ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: 50 ಓವರ್ಗಳಲ್ಲಿ 6 ವಿಕೆಟ್ಗೆ 247 (ಲಿಜೆಲ್ ಲೀ 40, ಲೌರಾ ವೊಲ್ವಾರ್ಡ್ತ್ 69, ತ್ರಿಷಾ ಚೆಟ್ಟಿ 22, ಮಿಗ್ನೊನ್ ಡು ಪ್ರೀಜ್ 44, ಲಾರಾ ಗೂಡಲ್ 38, ಸ್ಯೂನ್ ಲುಸ್ 12, ಮರಿಜಾನ್ ಕಾಪ್ ಔಟಾಗದೆ 11; ಶಿಖಾ ಪಾಂಡೆ 38ಕ್ಕೆ2, ಏಕ್ತಾ ಬಿಷ್ಠ್ 45ಕ್ಕೆ2, ಪೂನಮ್ ಯಾದವ್ 42ಕ್ಕೆ2).
ಭಾರತ: 48 ಓವರ್ಗಳಲ್ಲಿ 5 ವಿಕೆಟ್ಗೆ 248 (ಪ್ರಿಯಾ ಪೂನಿಯಾ 20, ಜೆಮಿಮಾ ರಾಡ್ರಿಗಸ್ 18, ಪೂನಮ್ ರಾವುತ್ 65, ಮಿತಾಲಿ ರಾಜ್ 66, ಹರ್ಮನ್ಪ್ರೀತ್ ಕೌರ್ ಔಟಾಗದೆ 39; ಶಬನಿಮ್ ಇಸ್ಮಾಯಿಲ್ 41ಕ್ಕೆ1, ಮರಿಜಾನ್ ಕಾಪ್ 29ಕ್ಕೆ1, ಅಯಬೊಂಗ ಖಾಕಾ 69ಕ್ಕೆ3).
ಫಲಿತಾಂಶ: ಭಾರತಕ್ಕೆ 5 ವಿಕೆಟ್ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ.
ಪಂದ್ಯಶ್ರೇಷ್ಠ: ಪೂನಮ್ ರಾವುತ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.