ADVERTISEMENT

ಮೋಸದಾಟ | ಭಾರತದ ಟೆಸ್ಟ್ ‘ಫಿಕ್ಸ್‌’ ಆಗಿರಲಿಲ್ಲ: ಐಸಿಸಿ

ಇಂಗ್ಲೆಂಡ್‌, ಆಸ್ಟ್ರೇಲಿಯಾ ಎದುರಿನ ಪಂದ್ಯಗಳಲ್ಲಿ ಮೋಸದಾಟ ನಡೆದಿರುವ ಆರೋಪ

ಪಿಟಿಐ
Published 17 ಮೇ 2021, 13:35 IST
Last Updated 17 ಮೇ 2021, 13:35 IST
ಐಸಿಸಿ
ಐಸಿಸಿ   

ದುಬೈ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರು ಕ್ರಮವಾಗಿ 2016 ಮತ್ತು 2017ರಲ್ಲಿ ನಡೆದಿದ್ದ ಭಾರತದ ಟೆಸ್ಟ್ ಪಂದ್ಯಗಳು ‘ಫಿಕ್ಸ್‌‘ ಆಗಿರಲಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಸ್ಪಷ್ಟಪಡಿಸಿದೆ. ಆ ಪಂದ್ಯಗಳಲ್ಲಿ ಮೋಸದಾಟ ನಡೆದಿದ್ದು ಪಂದ್ಯದ ಗತಿ ನೋಡಿದರೆ ಫಲಿತಾಂಶ ಏನಾಗುತ್ತದೆ ಎಂದು ಮೊದಲೇ ಹೇಳಬಹುದಾಗಿತ್ತು ಎಂದು ಅಲ್ ಜಝೀರಾ ಸುದ್ದಿ ವಾಹಿನಿಯಲ್ಲಿ ವರದಿ ಪ್ರಕಟವಾಗಿತ್ತು.

2016ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಪಂದ್ಯ ಮತ್ತು 2017ರಲ್ಲಿ ರಾಂಚಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಪಂದ್ಯಗಳನ್ನು 2018ರಲ್ಲಿ ಬಿಡುಗಡೆಗೊಂಡ‘ಕ್ರಿಕೆಟ್ ಮ್ಯಾಚ್ ಫಿಕ್ಸರ್ಸ್‌’ ಎಂಬ ಸಾಕ್ಷ್ಯಚಿತ್ರದಲ್ಲಿ ಅಲ್ ಜಝೀರಾ ಪ್ರಸ್ತಾಪಿಸಿತ್ತು.

ಸಾಕ್ಷ್ಯಚಿತ್ರದಲ್ಲಿ ಐದು ವ್ಯಕ್ತಿಗಳನ್ನು ತೋರಿಸಲಾಗಿದ್ದು ಅವರ ವರ್ತನೆ ಸಂದೇಹಾಸ್ಪದವಾಗಿತ್ತು ಎಂದು ಹೇಳಲಾಗಿದೆ. ಬುಕ್ಕಿ ಎಂದು ಹೇಳಲಾಗುವ ಅನಿಲ್ ಮುನಾವರ್ ಎಂಬ ವ್ಯಕ್ತಿ ಮೋಸದಾಟದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇದನ್ನು ಐಸಿಸಿ ನಿರಾಕರಿಸಿದೆ. ಐವರ ವರ್ತನೆ ಸಂದೇಹಾಸ್ಪದವಾಗಿರಬಹುದು. ಆದರೆ ಅವರು ಪಂದ್ಯ ಫಿಕ್ಸ್ ಮಾಡಿದ್ದರು ಎಂಬುದನ್ನು ಸಾಬೀತು ಮಾಡಲು ಸಾಕ್ಷ್ಯಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ತನಿಖೆಗೂ ಆದೇಶ ನೀಡಿದೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.