ನವದೆಹಲಿ: ಪಹಲ್ಗಾಮ್‌ನಲ್ಲಿ ಏಪ್ರಿಲ್ ಕೊನೆಯಲ್ಲಿ ಉಗ್ರರ ದಾಳಿಯ ನಂತರ ಪಾಕಿಸ್ತಾನದ ಪ್ರಭಾವಿ ವ್ಯಕ್ತಿಗಳ ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ಭಾರತ ಮುಂದುವರಿಸಿದೆ. ಅಗ್ರ ಕ್ರಿಕೆಟಿಗರಾದ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್ ಮತ್ತು ಮಾಜಿ ಆಲ್‌ರೌಂಡರ್ ವಸೀಂ ಅಕ್ರಮ್ ಅವರ ಇನ್‌ಸ್ಟಾಗ್ರಾಂ ಖಾತೆಗಳ ಮೇಲೆ ಭಾರತ ಶುಕ್ರವಾರ ನಿರ್ಬಂಧ ಹೇರಿದೆ.
ಟೆಸ್ಟ್ ತಂಡದ ನಾಯಕ ಶಾನ್ ಮಸೂದ್, ವೇಗಿ ಹಸನ್ ಅಲಿ, ನಸೀಮ್ ಶಾ, ಆಲ್‌ರೌಂಡರ್ ಶದಾಬ್ ಖಾನ್, ಮಾಜಿ ತಾರೆಗಳಾದ ಶೋಯೆಬ್ ಅಖ್ತರ್ ಮತ್ತು ಶಾಹಿದ್ ಅಫ್ರಿದಿ ಅವರೂ ಈ ಪಟ್ಟಿಯಲ್ಲಿದ್ದಾರೆ.
ದಿಗ್ಗಜ ಆಟಗಾರ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾಮಾಜಿಕ ಜಾಲತಾಣ ಖಾತೆಗೂ ನಿರ್ಬಂಧದ ಬಿಸಿ ತಟ್ಟಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಎಸೆಗಾರ ಅರ್ಷದ್ ನದೀಂ ಅವರ ಇನ್‌ಸ್ಟಾ ಖಾತೆಯನ್ನೂ ಬ್ಲಾಕ್ ಮಾಡಲಾಗಿದೆ.
ಮಾಜಿ ವೇಗಿ ವಕಾರ್ ಯೂನಸ್ ಮತ್ತು ಬ್ಯಾಟರ್ ಮಿಸ್ಬಾ ಉಲ್ ಹಕ್ ಅವರ ಜಾಲತಾಣ ಖಾತೆಗೆ ನಿರ್ಬಂಧ ತಟ್ಟಿಲ್ಲ.
ಈ ಹಿಂದೆ ಕೆಲವು ಖ್ಯಾತನಾಮ ಆಟಗಾರರ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.