ADVERTISEMENT

ಐಪಿಎಲ್‌ ಕ್ರಿಕೆಟ್ ಹಬ್ಬ ಇಂದಿನಿಂದ: ಚೆನ್ನೈಗೆ ಬೆಂಗಳೂರು ಚಾಲೆಂಜ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:21 IST
Last Updated 22 ಮಾರ್ಚ್ 2019, 20:21 IST
   

ಚೆನ್ನೈ: ಹೋಳಿ ಹಬ್ಬದ ರಂಗಿನಲ್ಲಿ ಮಿಂದೆದ್ದ ಚೆನ್ನೈನಲ್ಲಿ ಈಗ ಚುಟುಕು ಕ್ರಿಕೆಟ್ ಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ’ತಾಲಾ’ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಡುವಣ ಪೈಪೋಟಿ ಕಣ್ತುಂಬಿಕೊಳ್ಳಲು ಇಲ್ಲಿಯ ಕ್ರಿಕೆಟ್‌ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.

ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ಛಲ. ಹೋದ ಹನ್ನೊಂದು ಟೂರ್ನಿಗಳಲ್ಲಿಯೂ ಪ್ರಶಸ್ತಿ ಗೆಲುವಿನ ಕನಸು ಭಗ್ನಗೊಂಡಿರುವ ನಿರಾಸೆಯನ್ನು ಬದಿಗಿಟ್ಟು, ‘ಈ ಸಲ ಕಪ್ ನಮ್ದೆ’ ಎಂಬ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲು ಆರ್‌ಸಿಬಿ ಸಿದ್ಧವಾಗಿದೆ. ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಮತ್ತು ಮಾಜಿ ನಾಯಕ ಧೋನಿಯ ನಡುವಣದ ಪ್ರತಿಷ್ಠೆಯ ಪಂದ್ಯವಾಗಿಯೂ ಇದು ಗಮನ ಸೆಳೆದಿದೆ.

ಉಭಯ ತಂಡಗಳ ಬಲಾಬಲ

ADVERTISEMENT

ಪಂದ್ಯ: 22

ಸಿಎಸ್‌ಕೆ ಜಯ: 14

ಆರ್‌ಸಿಬಿ ಜಯ: 07

ಫಲಿತಾಂಶವಿಲ್ಲ: 01

ಪ್ರಮುಖ ಅಂಶಗಳು

34 ಜಯ: ಸಿಎಸ್‌ಕೆ ತಂಡವು ಚೆಪಾಕ್‌ನಲ್ಲಿ ಗೆದ್ದ ಪಂದ್ಯಗಳು. 14ರಲ್ಲಿ ಸೋಲನುಭವಿಸಿದೆ

02 ಜಯ: ಆರ್‌ಸಿಬಿಯು ಚೆಪಾಕ್‌ನಲ್ಲಿ ಜಯಿಸಿದ ಪಂದ್ಯಗಳು. ಇನ್ನುಳಿದ ಆರರಲ್ಲಿ ಸೋತಿದೆ.

15 ರನ್‌; ಟೂರ್ನಿಯಲ್ಲಿ ಐದು ಸಾವಿರ ರನ್‌ ಗಡಿ ತಲುಪಲು ಸಿಎಸ್‌ಕೆಯ ಸುರೇಶ್ ರೈನಾಗೆ ಬೇಕಿರುವ ರನ್‌ಗಳು

52 ರನ್; ಐಪಿಎಲ್‌ನಲ್ಲಿ ಐದು ಸಾವಿರ ರನ್‌ ಪೂರೈಸಲು ವಿರಾಟ್ ಕೊಹ್ಲಿಗೆ ಅವಶ್ಯವಿರುವ ರನ್‌ಗಳು

08 ತಂಡಗಳು: ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.