ADVERTISEMENT

ಪುಟಿದೇಳುವ ನಿರೀಕ್ಷೆಯಲ್ಲಿ ಆರ್‌ಸಿಬಿ: ಟಾಸ್‌ ಗೆದ್ದ ರಾಯಲ್ಸ್‌, ಬೌಲಿಂಗ್‌ ಆಯ್ಕೆ

ಐಪಿಎಲ್‌ 2019

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 14:32 IST
Last Updated 2 ಏಪ್ರಿಲ್ 2019, 14:32 IST
ಟ್ವಿಟರ್‌ ಚಿತ್ರ
ಟ್ವಿಟರ್‌ ಚಿತ್ರ   

ಜೈಪುರ: ಸತತ ಮೂರು ಪಂದ್ಯಗಳಲ್ಲಿ ಸೋತು ಸೊರಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ‘ಪಿಂಕ್‌ ಸಿಟಿ’ಯಲ್ಲಿ ಪುಟಿದೇಳುವುದೇ...? ಹೀಗೊಂದು ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.

ನಗರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ 12 ಆವೃತ್ತಿಯ 14ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಆರ್‌ಸಿಬಿ ಎದುರಿಸಲಿದೆ.

ಸದ್ಯ ಟಾಸ್‌ ಗೆದ್ದಿರುವ ರಾಯಲ್ಸ್‌, ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ADVERTISEMENT

ಕೊಹ್ಲಿ ಪಡೆ ಈ ಬಾರಿಆಡಿರುವಮೂರೂ ಪಂದ್ಯಗಳಲ್ಲೂ ನೀರಸ ಸಾಮರ್ಥ್ಯ ತೋರಿತ್ತು.ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಕೇವಲ 70 ರನ್‌ಗಳಿಗೆ ಆಲೌಟ್‌ ಆಗಿದ್ದ ತಂಡ, ತವರಿನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್‌ ಎದುರಿನ ಹಣಾಹಣಿ ಯಲ್ಲಿ ಗೆಲುವಿನ ಸನಿಹಕ್ಕೆ ಬಂದು ಎಡವಿತ್ತು. ಭಾನುವಾರ ನಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಎದುರಿನ ಪೈಪೋಟಿಯಲ್ಲಿ ತಂಡ ಸೋತ ರೀತಿ ಕೊಹ್ಲಿ ‍ಪಡೆಯು ಹೋರಾಟಮನೋಭಾವವನ್ನೇ ಮರೆತಿದೆ ಎಂಬ ಮಾತಿಗೆ ಪುಷ್ಠಿ ನೀಡುವಂತಿತ್ತು.

ರಾಜಸ್ಥಾನಕ್ಕೂ ಮೊದಲ ಗೆಲುವಿನ ತವಕ: ಅಜಿಂಕ್ಯ ರಹಾನೆ ಸಾರಥ್ಯದ ರಾಜಸ್ಥಾನ್‌ ರಾಯಲ್ಸ್‌ ಕೂಡಾ ಈ ಬಾರಿಯ ಲೀಗ್‌ನಲ್ಲಿ ಮೊದಲ ಗೆಲುವು ಪಡೆಯಲು ತುದಿಗಾಲಿನಲ್ಲಿ ನಿಂತಿದೆ.

ಈ ತಂಡ ಕಿಂಗ್ಸ್‌ ಇಲೆವನ್‌ ಪಂಜಾಬ್‌, ಸನ್‌ರೈಸರ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ದಿಟ್ಟ ಹೋರಾಟ ನಡೆಸಿ ಸೋತಿತ್ತು.

ತಂಡಗಳು ಇಂತಿವೆ:
ಆರ್‌ಸಿಬಿ: ವಿರಾಟ್ ಕೊಹ್ಲಿ (ನಾಯಕ), ಪಾರ್ಥಿವ್ ಪಟೇಲ್ (ವಿಕೆಟ್‌ಕೀಪರ್), ಎಬಿ ಡಿವಿಲಿಯರ್ಸ್, ಮೊಯಿನ್ ಅಲಿ, ಶಿಮ್ರೊನ್ ಹೆಟ್ಮೆಯರ್, ಶಿವಂ ದುಬೆ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಪವನ್ ನೇಗಿ, ವಾಷಿಂಗ್ಟನ್ ಸುಂದರ್, ಟಿಮ್ ಸೌಥಿ, ಗುರುಕೀರತ್ ಸಿಂಗ್ ಮಾನ್, ಹೆನ್ರಿಚ್ ಕ್ಲಾಸನ್, ಅಕ್ಷದೀಪ್ ನಾಥ್, ಕುಲವಂತ ಖೆಜ್ರೋಲಿಯಾ.

ರಾಜಸ್ಥಾನ್ ರಾಯಲ್ಸ್: ಅಜಿಂಕ್ಯ ರಹಾನೆ (ನಾಯಕ), ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್‌, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ಆ್ಯಷ್ಟನ್ ಟರ್ನರ್, ಈಶ್ ಸೋಧಿ, ಒಷೇನ್ ಥಾಮಸ್, ಲಿಯಾಮ್ ಲಿವಿಂಗ್‌ಸ್ಟೋನ್, ಸಂಜು ಸ್ಯಾಮ್ಸನ್, ಶುಭಂ ರಾಂಜಣೆ, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಸುದೇಶನ್ ಮಿಧುನ್, ಜಯದೇವ್ ಉನದ್ಕತ್, ಪ್ರಶಾಂತ್ ಚೋಪ್ರಾ, ಮಹಿಪಾಲ್ ಲೊಮ್ರೊರ್, ಆರ್ಯಮನ್ ಬಿರ್ಲಾ, ರಿಯಾನ್ ಪರಾಗ್, ಧವಳ್ ಕುಲಕರ್ಣಿ, ಕೃಷ್ಣಪ್ಪ ಗೌತಮ್, ವರುಣ್ ಆ್ಯರನ್, ಶಶಾಂಕ್ ಸಿಂಗ್, ಮನನ್ ವೊಹ್ರಾ, ರಾಹುಲ್‌ ತ್ರಿಪಾಠಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.