ADVERTISEMENT

IPL-2020 | ‘ಹಿಟ್‌ಮ್ಯಾನ್‌’ಬಳಗಕ್ಕೆ ಗೆಲುವು, ಕೆಕೆಆರ್‌ಗೆ ನಿರಾಸೆ

ಏಜೆನ್ಸೀಸ್
Published 23 ಸೆಪ್ಟೆಂಬರ್ 2020, 23:28 IST
Last Updated 23 ಸೆಪ್ಟೆಂಬರ್ 2020, 23:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಬುಧಾಬಿ: ‘ಹಿಟ್‌ಮ್ಯಾನ್‌’ರೋಹಿತ್ ಶರ್ಮಾ ಅವರ ಬೀಸಾಟದಿಂದಾಗಿ ಮುಂಬೈ ಇಂಡಿಯನ್ಸ್‌ ಗೆಲುವಿನ ನಗೆ ಬೀರಿತು.

ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡದ ಫಲವಾಗಿ ಸೋಲುಕಂಡಿತು.

ರೋಹಿತ್ (80; 54ಎಸೆತ, 3ಬೌಂಡರಿ, 6ಸಿಕ್ಸರ್) ಆಟದ ಬಲದಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 195 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತ ತಂಡ 146/9ರನ್‌ಗಳಿಗೆ ಔಟ್‌ ಆಯಿತು..

ADVERTISEMENT

ಶೇಖ್ ಝಯೀದ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಕೋಲ್ಕತ್ತ ತಂಡದ ನಾಯಕ ದಿನೇಶ್ ಕಾರ್ತಿಕ್ ಫೀಲ್ಡಿಂಗ್ ಅಯ್ಕೆ ಮಾಡಿಕೊಂಡರು. ಆರು ಬೌಲರ್‌ಗಳನ್ನು ಕಣಕ್ಕಿಳಿಸಿದರು. ಆದರೆ ಅವರ ಪ್ರಯೋಗಗಳಿಗೆ ಫಲ ಸಿಗದಂತೆ ನೋಡಿಕೊಂಡಿದ್ದು ರೋಹಿತ್. 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪಂಚ್, ಡ್ರೈವ್, ಫ್ರಂಟ್‌ಫೂಟ್ ಶಾಟ್‌ಗಳ ಅಮೋಘ ಆಟದ ಸವಿ ಉಣಬಡಿಸಿದರು.

ಕೆಕೆಆರ್‌ ತಂಡದಿಂದ ಉತ್ತಮ ಜೊತೆಯಾಟ ಬರಲಿಲ್ಲವಾದ್ದರಿಂದ ತಂಡ ಸುಲಭವಾಗಿ ಹಿಟ್‌ ಮ್ಯಾನ್‌ ಬಳಗಕ್ಕೆ ಮಣಿಯಿತು.

ಸಂಕ್ಷಿಪ್ತ ಸ್ಕೋರ್‌

ಮುಂಬೈ ಇಂಡಿಯನ್ಸ್‌: 195/5
ಕೆಕೆಆರ್‌:146/9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.