ADVERTISEMENT

IPL 2021 FINAL | CSK vs KKR: ಕೋಲ್ಕತ್ತ ಮಣಿಸಿದ ಚೆನ್ನೈಗೆ 4ನೇ ಐಪಿಎಲ್ ಕಿರೀಟ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 27 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿಗೆ ಮುತ್ತಿಕ್ಕಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಅತ್ತ ಕೋಲ್ಕತ್ತ ತಂಡದ ಮೂರನೇ ಐಪಿಎಲ್ ಟ್ರೋಫಿ ಕನಸು ಭಗ್ನಗೊಂಡಿದೆ.

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 18:52 IST
Last Updated 15 ಅಕ್ಟೋಬರ್ 2021, 18:52 IST

ಚೆನ್ನೈ ಮಡಿಲಿಗೆ ಐಪಿಎಲ್ ಟ್ರೋಫಿ

ಚೆನ್ನೈ ಚಾಂಪಿಯನ್

ಧೋನಿಯ ಚೆನ್ನೈಗೆ 4ನೇ ಐಪಿಎಲ್ ಕಿರೀಟ

ಟ್ರೋಫಿ ಗೆಲುವಿನ ರೋಚಕ ಕ್ಷಣ

ಫೈನಲ್‌ನಲ್ಲಿ ಕೋಲ್ಕತ್ತ ವಿರುದ್ಧ 27 ರನ್ ಅಂತರದ ಭರ್ಜರಿ ಗೆಲುವು

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 27 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿಗೆ ಮುತ್ತಿಕ್ಕಿದೆ. 

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಅತ್ತ ಕೋಲ್ಕತ್ತ ತಂಡದ ಮೂರನೇ ಐಪಿಎಲ್ ಟ್ರೋಫಿ ಕನಸು ಭಗ್ನಗೊಂಡಿದೆ.  

ADVERTISEMENT

ಐಪಿಎಲ್‌ನಲ್ಲಿ ಚೆನ್ನೈ ಚಾಂಪಿಯನ್ ಆದ ವರ್ಷಗಳು:
2010, 2011, 2018 ಮತ್ತು 2021

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ  ಚೆನ್ನೈ ತಂಡವವು ಫಫ್ ಡುಪ್ಲೆಸಿ (86) ಬಿರುಸಿನ ಅರ್ಧಶತಕ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.  ಋತುರಾಜ್ ಗಾಯಕವಾಡ್ (32), ರಾಬಿನ್ ಉತ್ತಪ್ಪ (31) ಹಾಗೂ ಮೊಯಿನ್ ಅಲಿ (37*) ಜೊತೆಗೆ ತಲಾ ಅರ್ಧಶತಕಗಳ ಜೊತೆಯಾಟ ಕಟ್ಟಿದ ಡುಪ್ಲೆಸಿ 100ನೇ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿದರು. 

ಬಳಿಕ ಗುರಿ ಬೆನ್ನತ್ತಿದ ಕೋಲ್ಕತ್ತ, ಆರಂಭಿಕರಾದ ವೆಂಕಟೇಶ್ ಅಯ್ಯರ್ (50) ಹಾಗೂ ಶುಭಮನ್ ಗಿಲ್ (51) ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ಗಿಲ್-ಅಯ್ಯರ್ ಹೋರಾಟವು ವ್ಯರ್ಥವೆನಿಸಿದೆ. 

ಪಂದ್ಯಕ್ಕೆ ತಿರುವು ನೀಡಿದ ಜಡೇಜ ಅದ್ಭುತ ಕ್ಯಾಚ್

ಚೆನ್ನೈ ಪಾಳಯದಲ್ಲಿ ಮನೆ ಮಾಡಿದ ಸಂಭ್ರಮ

ಶಾರ್ದೂಲ್‌ಗೆ ಮೂರನೇ ವಿಕೆಟ್

ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದ ಜಡೇಜ

ಗೆಲುವಿನತ್ತ ಚೆನ್ನೈ

15 ಓವರ್ ಅಂತ್ಯಕ್ಕೆ ಕೋಲ್ಕತ್ತ ಆರು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ. ಅಂತಿಮ 30 ಎಸೆತಗಳಲ್ಲಿ ಗೆಲುವಿಗೆ 73 ರನ್ ಬೇಕಿದೆ. 

ಎರಡು ಅದ್ಭುತ ಕ್ಯಾಚ್ ಹಿಡಿದ ಜಡೇಜ

ಶಾರ್ದೂಲ್‌ಗೆ ಒಂದೇ ಓವರ್‌ನಲ್ಲಿ ಎರಡು ವಿಕೆಟ್, ಚೆನ್ನೈ ತಿರುಗೇಟು

ಅಯ್ಯರ್ ಸ್ಫೋಟಕ ಆಟ

ಅಂತಿಮ 10 ಓವರ್‌ಗಳಲ್ಲಿ ಕೆಕೆಆರ್ ಗೆಲುವಿಗೆ ಬೇಕು 105 ರನ್

10 ಓವರ್ ಅಂತ್ಯಕ್ಕೆ ಕೆಕೆಆರ್ ವಿಕೆಟ್ ನಷ್ಟವಿಲ್ಲದೆ 88 ರನ್ ಗಳಿಸಿದೆ. ಶುಭಮನ್ ಗಿಲ್ (38*) ಹಾಗೂ ವೆಂಕಟೇಶ್ ಅಯ್ಯರ್ (50*) ಕ್ರೀಸಿನಲ್ಲಿದ್ದಾರೆ. 

ಗಿಲ್-ಅಯ್ಯರ್ ಫಿಫ್ಟಿ ಜೊತೆಯಾಟ

ಕೆಕೆಆರ್ ದಿಟ್ಟ ಉತ್ತರ

ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್‌ಗೆ ಶುಭಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಬಿರುಸಿನ ಆರಂಭವೊದಗಿಸಿದರು. 5 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 47 ರನ್ ಗಳಿಸಿದೆ. 
 

ಫಫ್ ಡುಪ್ಲೆಸಿ ಅಮೋಘ ಆಟ

ಕೋಲ್ಕತ್ತ ಗೆಲುವಿಗೆ 193 ರನ್ ಗುರಿ

ಫಫ್ ಡುಪ್ಲೆಸಿ (86) ಬಿರುಸಿನ ಅರ್ಧಶತಕ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.  

ಫಫ್ ಹಾಗೂ ಋತುರಾಜ್ ಗಾಯಕವಾಡ್ ಮೊದಲ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ಕಟ್ಟಿದರು. ಬಳಿಕ ರಾಬಿನ್ ಉತ್ತಪ್ಪ ಜೊತೆಗೂ ಡುಪ್ಲೆಸಿ, ಕೇವಲ 25 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ನೀಡಿದರು. ಗಾಯಕವಾಡ್ 32 ರನ್ ಹಾಗೂ ಉತ್ತಪ್ಪ ಕೇವಲ 15 ಎಸೆತಗಳಲ್ಲಿ ಮೂರು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು. 

ಕೊನೆಯ ಹಂತದಲ್ಲಿ ಮೊಯಿನ್ ಅಲಿ ಅವರೊಂದಿಗೂ ಫಿಫ್ಟಿ ಜೊತೆಯಾಟದಲ್ಲಿ ಭಾಗಿಯಾದ ಡುಪ್ಲೆಸಿ ಚೆನ್ನೈ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. 

ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಔಟ್ ಆದ ಡುಪ್ಲೆಸಿ, 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 86 ರನ್ ಗಳಿಸಿದರು. ಅತ್ತ ಮೊಯಿನ್ ಅಲಿ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿ ಔಟಾಗದೆ ಉಳಿದರು. 

ಫಫ್-ಮೊಯಿನ್ ಫಿಫ್ಟಿ ಜೊತೆಯಾಟ

ಕೋವಿಡ್ ವಿರುದ್ಧ ಗೆದ್ದ ಐಪಿಎಲ್

ಫಫ್ ಪವರ್‌ಫುಲ್ ಬ್ಯಾಟಿಂಗ್

15 ಎಸೆತಗಳಲ್ಲಿ 31 ರನ್ ಗಳಿಸಿದ ಉತ್ತಪ್ಪ

ಫಫ್-ಉತ್ತಪ್ಪ 25 ಎಸೆತಗಳಲ್ಲಿ ಫಿಫ್ಟಿ ಜೊತೆಯಾಟ

ಸವಾಲಿನ ಮೊತ್ತದತ್ತ ಚೆನ್ನೈ

ರಾಬಿನ್ ಉತ್ತಪ್ಪ ಜೊತೆಗೂ ಫಫ್ ಡುಪ್ಲೆಸಿ ಬಿರುಸಿನ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. 15 ಎಸೆತಗಳನ್ನು ಎದುರಿಸಿದ ಉತ್ತಪ್ಪ ಮೂರು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು. 

13.3 ಓವರ್ ವೇಳೆಗೆ ಚೆನ್ನೈ ಎರಡು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತ್ತು. 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವ ಡುಪ್ಲಿಸಿ, 100ನೇ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿದರು. 

35 ಎಸೆತಗಳಲ್ಲಿ ಡುಪ್ಲೆಸಿ ಫಿಫ್ಟಿ ಸಾಧನೆ

10 ಓವರ್ ಅಂತ್ಯಕ್ಕೆ ಚೆನ್ನೈ 80/1

10 ಓವರ್ ಅಂತ್ಯಕ್ಕೆ ಚೆನ್ನೈ ಒಂದು ವಿಕೆಟ್ ನಷ್ಟಕ್ಕೆ ರನ್ ಗಳಿಸಿದೆ. ಫಫ್ ಡುಪ್ಲೆಸಿ (37*) ಹಾಗೂ ರಾಬಿನ್ ಉತ್ತಪ್ಪ (9*) ಕ್ರೀಸಿನಲ್ಲಿದ್ದಾರೆ.

ಮೊದಲ ವಿಕೆಟ್ ಗಳಿಸಿದ ಸುನಿಲ್ ನಾರಾಯಣ್ ಸಂಭ್ರಮ

32 ರನ್ ಗಳಿಸಿ ಗಾಯಕವಾಡ್ ಔಟ್

ಋತುರಾಜ್ ಗಾಯಕವಾಡ್ (25*) ಹಾಗೂ ಫಾಫ್ ಡು ಪ್ಲೆಸಿಸ್ (16*) ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 61 ರನ್ ಗಳಿಸಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಗಾಯಕವಾಡ್ (32) ಅವರನ್ನು ಸುನಿಲ್ ನಾರಾಯಣ್ ಹೊರದಬ್ಬಿದರು. ಫಫ್ ಡುಪ್ಲೆಸಿ (27*) ಕ್ರೀಸಿನಲ್ಲಿದ್ದಾರೆ. 

ಪವರ್ ಪ್ಲೇ ಅಂತ್ಯಕ್ಕೆ ಚೆನ್ನೈ 50/0

ಗಾಯಕವಾಡ್-ಡುಪ್ಲೆಸಿ ಉತ್ತಮ ಆರಂಭ

ಚೆನ್ನೈ ತಂಡಕ್ಕೆ ಋತುರಾಜ್ ಗಾಯಕವಾಡ್ (25*) ಹಾಗೂ ಫಫ್ ಡು ಪ್ಲೆಸಿಸ್ (16*) ಉತ್ತಮ ಆರಂಭವೊದಗಿಸಿದರು. 5 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದೆ. 

ರೋಚಕ ಪಂದ್ಯ ಆರಂಭ

2012ರಲ್ಲಿ ಚೆನ್ನೈ ವಿರುದ್ಧ ಫೈನಲ್‌ನಲ್ಲಿ ಗೆದ್ದು ಕಪ್ ಜಯಿಸಿದ್ದ ಕೋಲ್ಕತ್ತ

ಚೆನ್ನೈ ಆಟಗಾರರ ಮೈಲಿಗಲ್ಲು

ಇತ್ತಂಡಗಳಲ್ಲೂ ಯಾವುದೇ ಬದಲಾವಣೆಗಳಿಲ್ಲ

ಟಾಸ್ ಝಲಕ್

ಟಾಸ್ ಗೆದ್ದ ಮಾರ್ಗನ್ ಫೀಲ್ಡಿಂಗ್ ಆಯ್ಕೆ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರುದ್ಧ ನಡೆಯುತ್ತಿರುವ ಐಪಿಎಲ್ 2021 ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಏಯಾನ್ ಮಾರ್ಗನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ವಿಂಡೀಸ್ ಆಟಗಾರರ ಗೆಳೆತನ

ಚೆನ್ನೈ ಬ್ಯಾಟರ್‌ಗಳಿಗೆ ಕೆಕೆಆರ್ ಬೌಲರ್‌ಗಳ ಸವಾಲು

ಗಾಯಕವಾಡ್‌ಗೆ ಚಕ್ರವರ್ತಿ ಸವಾಲು

ಪಿಚ್ ಮೇಲೆ ನೋಟ

ಮೈದಾನ ಸಜ್ಜು

ಧೋನಿ vs ಮಾರ್ಗನ್

ರೋಚಕ ಪಂದ್ಯಕ್ಕೆ ಕ್ಷಣಗಣನೆ

ಗೆಲುವು ಯಾರಿಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.