ADVERTISEMENT

ಐಪಿಎಲ್-2021: ನಾಯಕನಾಗಿ ಗಂಭೀರ್‌ ಯಾವಾಗಲೂ ಆಕ್ರಮಣಕಾರಿ -ಪ್ಯಾಟ್ ಕಮಿನ್ಸ್

ಏಜೆನ್ಸೀಸ್
Published 5 ಏಪ್ರಿಲ್ 2021, 15:59 IST
Last Updated 5 ಏಪ್ರಿಲ್ 2021, 15:59 IST
ಪ್ಯಾಟ್‌ ಕಮಿನ್ಸ್
ಪ್ಯಾಟ್‌ ಕಮಿನ್ಸ್   

ಚೆನ್ನೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಕೋಲ್ಕತ್ತ ನೈಟ್‌ರೈಡರ್ಸ್‌ (ಕೆಕೆಆರ್‌) ತಂಡವನ್ನು ಎರಡು ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಮಾಜಿ ನಾಯಕ ಗೌತಮ್‌ ಗಂಭೀರ್‌ ಅವರ ಆಕ್ರಮಣಕಾರಿ ಮನೋಭಾವದ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಕೆಆರ್ ತಂಡವುಗೌತಮ್‌ ನಾಯಕತ್ವದಲ್ಲಿ2012 ಮತ್ತು 2014ರಲ್ಲಿ ಪ್ರಶಸ್ತಿ ಜಯಿಸಿತ್ತು. 2014ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಪ್ಯಾಟ್‌ ಕೆಕೆಆರ್‌ ಪರ ಕಣಕ್ಕಿಳಿದಿದ್ದರು. ವಿಶೇಷವೆಂದರೆ ತಮ್ಮ ಮೊದಲ ಟೂರ್ನಿಯಲ್ಲಿಯೇ ಅವರು ಪ್ರಶಸ್ತಿಯ ಸವಿಯುಂಡಿದ್ದರು. ಆ ಸಂದರ್ಭವು ತಮ್ಮ ನೆಚ್ಚಿನ ಕ್ಷಣ ಎಂದು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ʼ2014ರಲ್ಲಿ ನನ್ನ ಮೊದಲ ಐಪಿಎಲ್‌ ಟೂರ್ನಿಯಲ್ಲಿ ಕೋಲ್ಕತ್ತ ಪ್ರಶಸ್ತಿ ಗೆದ್ದಿತ್ತು. ಮರುದಿನ ಸಾವಿರಾರು ಅಭಿಮಾನಿಗಳು ರಸ್ತೆಗಳಲ್ಲಿ ಸಂಭ್ರಮಿಸಿದ್ದರು. ಇದು ನನ್ನನೆಚ್ಚಿನ ಕ್ಷಣʼ ಎಂದು ಕಮಿನ್ಸ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ʼಗಂಭೀರ್‌ ನಾಯಕತ್ವದಲ್ಲಿ ಆಡುವುದನ್ನು ನಾನು ಆನಂದಿಸುತ್ತೇನೆ. ಅವರು ನಾನು ಯಾವಾಗಲು ಇಷ್ಟಪಡುವಂಥ ಆಕ್ರಮಣಕಾರಿ ನಾಯಕನಾಗಿದ್ದರುʼ ಎಂದೂ ತಿಳಿಸಿದ್ದಾರೆ.

ಅಭಿಮಾನಿಯೊಬ್ಬರು ನೀವು ಯಾರು ಬೌಲಿಂಗ್‌ ಮಾಡುವುದನ್ನು ನೋಡಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿರುವ ಆಸ್ಟ್ರೇಲಿಯಾ ವೇಗಿ, ʼನಾನು ಜಸ್‌ಪ್ರೀತ್‌ ಬೂಮ್ರಾ ಹಾಗೂ ಕೆಕೆಆರ್‌ ಪರ ಕಮಲೇಶ್‌‌ ನಾಗರಕೋಟಿ ಬೌಲಿಂಗ್‌ ಮಾಡುವುದನ್ನು ನೋಡಲು ಇಷ್ಟಪಡುತ್ತೇನೆʼ ಎಂದಿದ್ದಾರೆ.

ಈ ಬಾರಿಯ ಐಪಿಎಲ್‌ ಟೂರ್ನಿಯು ಏಪ್ರಿಲ್‌ 9ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಕೆಕೆಆರ್‌ ತನ್ನ ಮೊದಲ ಪಂದ್ಯವನ್ನು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಏಪ್ರಿಲ್‌11 ರಂದು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.