ADVERTISEMENT

IPL 2021 | KKR vs RR: ರಾಜಸ್ಥಾನ್ 85 ರನ್ನಿಗೆ ಆಲೌಟ್; ಪ್ಲೇ-ಆಫ್ ಸನಿಹ ಕೋಲ್ಕತ್ತ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 86 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಕೋಲ್ಕತ್ತ ನೈಟ್ ರೈಡರ್ಸ್, ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. 172 ರನ್ ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ್ ಕೇವಲ 85 ರನ್ನಿಗೆ ಆಲೌಟ್ ಆಗಿತ್ತು.

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 17:56 IST
Last Updated 7 ಅಕ್ಟೋಬರ್ 2021, 17:56 IST

ಮುಂಬೈ ಪ್ಲೇ-ಆಫ್ ಪ್ರವೇಶಕ್ಕೆ ಅಸಾಧ್ಯ ಸವಾಲು

ಕೋಲ್ಕತ್ತ ಗೆಲುವಿನ ಸಂಭ್ರಮ

ಕೆಕೆಆರ್‌ಗೆ 86 ರನ್ ಅಂತರದ ಭರ್ಜರಿ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ 86 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಪ್ಲೇ-ಆಫ್ ಪ್ರವೇಶದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.  ಅತ್ತ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಟೂರ್ನಿಯಿಂದಲೇ ಹೊರಬಿದ್ದಿವೆ. 

ADVERTISEMENT

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್,  ಶುಭಮನ್ ಗಿಲ್ ಅರ್ಧಶತಕದ (56) ನೆರವಿನಿಂದ 171 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಶಿವಂ ಮಾವಿ (21ಕ್ಕೆ 4 ವಿಕೆಟ್) ಹಾಗೂ ಲಾಕಿ ಫರ್ಗ್ಯುಸನ್ (18ಕ್ಕೆ 3 ವಿಕೆಟ್) ದಾಳಿಗೆ ತತ್ತರಿಸಿದ ರಾಜಸ್ಥಾನ್ 16.1 ಓವರ್‌ಗಳಲ್ಲಿ ಕೇವಲ 85 ರನ್ನಿಗೆ ಸರ್ವಪತನವನ್ನು ಕಂಡಿತ್ತು. 

ರಾಜಸ್ಥಾನ್ 7ನೇ ವಿಕೆಟ್ ಪತನ

ರಾಜಸ್ಥಾನ್ ಕಳಪೆ ಆಟ

ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಗಳಿಸಿದ ಲಾಕಿ ಫರ್ಗ್ಯುಸನ್

13 ರನ್ನಿಗೆ ರಾಜಸ್ಥಾನ್ ನಾಲ್ಕು ವಿಕೆಟ್ ಪತನ

ಸವಾಲಿನ ಮೊತ್ತ ಬೆನ್ನತ್ತಿದ ರಾಜಸ್ಥಾನ್ ಉತ್ತಮ ಕೆಟ್ಟದಾಗಿತ್ತು. 13 ರನ್ ಗಳಿಸುವದರೆಡೆಗೆ ನಾಲ್ಕು ವಿಕೆಟ್ ಪತನವಾಯಿತು. ಯಶಸ್ವಿ ಜೈಸ್ವಾಲ್ (0), ನಾಯಕ ಸಂಜು ಸ್ಯಾಮ್ಸನ್ (1), ಲಯಾಮ್ ಲಿವಿಂಗ್‌ಸ್ಟೋನ್ (6) ಹಾಗೂ ಅನುಜ್ ರಾವತ್ (0) ಪೆವಿಲಿಯನ್‌ಗೆ ಮರಳಿದರು.

ರಾಜಸ್ಥಾನ್‌ಗೆ ಆರಂಭಿಕ ಆಘಾತ

ರಾಜಸ್ಥಾನ್ ಗೆಲುವಿಗೆ 172 ರನ್ ಗುರಿ

ಬಲಗೈ ಆರಂಭಿಕ ಆಟಗಾರ ಶುಭಮನ್ ಗಿಲ್ ಆಕರ್ಷಕ ಅರ್ಧಶತಕದ (56) ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 171 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. 

ವೆಂಕಟೇಶ್ ಅಯ್ಯರ್ (38) ಜೊತೆ ಸೇರಿದ ಗಿಲ್ ಮೊದಲ ವಿಕೆಟ್‌ಗೆ 79 ರನ್‌ಗಳ ಜೊತೆಯಾಟ ನೀಡಿದರು. ಅಂತಿಮ ಹಂತದಲ್ಲಿ ರಾಹುಲ್ ತ್ರಿಪಾಠಿ (21), ದಿನೇಶ್ ಕಾರ್ತಿಕ್ (14*) ಹಾಗೂ ನಾಯಕ ಏಯಾನ್ ಮಾರ್ಗನ್ (13*) ಉಪಯುಕ್ತ ಕಾಣಿಕೆ ನೀಡಿದರು. 

ರಾಹುಲ್ ತ್ರಿಪಾಠಿ ಔಟ್

ವೆಂಕಟೇಶ್ ಅಯ್ಯರ್ ಔಟ್ ಆಗಿದ್ದು ಹೇಗೆ?

ರಾಜಸ್ಥಾನ್ ಬೌಲರ್‌ಗಳ ತಿರುಗೇಟು

ರೋಚಕ ಕದನ

ಸತತ ಎರಡನೇ ಅರ್ಧಶತಕ ಗಳಿಸಿದ ಗಿಲ್

ಫಿಫ್ಟಿ ಜೊತೆಯಾಟ

ಅಯ್ಯರ್-ಗಿಲ್ ಅಬ್ಬರ

ಕೋಲಕ್ಕ ತಂಡಕ್ಕೆ ಓಪನರ್‌ಗಳಾದ ವೆಂಕಟೇಶ್ ಅಯ್ಯರ್ ಹಾಗೂ ಶುಭಮನ್ ಗಿಲ್ ಬಿರುಸಿನ ಆರಂಭವೊದಗಿಸಿದರು. ಪರಿಣಾಮ 10 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿತ್ತು. 

ಪ್ಲೇಯಿಂಗ್-ಇಲೆವೆನ್

ಟಾಸ್ ಝಲಕ್

ಟಾಸ್ ಗೆದ್ದ ಸಂಜು ಫೀಲ್ಡಿಂಗ್ ಆಯ್ಕೆ

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಕೆಕೆಆರ್‌ಗೆ ಪ್ಲೇ-ಆಫ್ ಗುರಿ

ಸಂಜು vs ವಿಲಿಯಮ್ಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.