ADVERTISEMENT

IPL 2021 | RCB vs DC: ಭರತ್-ಮ್ಯಾಕ್ಸ್‌ವೆಲ್ ಅಬ್ಬರ; ಡೆಲ್ಲಿ ವಿರುದ್ಧ ಆರ್‌ಸಿಬಿಗೆ ರೋಚಕ ಗೆಲುವು

ಶ್ರೀಕರ್ ಭರತ್ (78*) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (51*) ಬಿರುಸಿನ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಭರತ್ ನೈಜ ಹೀರೊ ಎನಿಸಿದರು.

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 18:55 IST
Last Updated 8 ಅಕ್ಟೋಬರ್ 2021, 18:55 IST

ಪ್ಲೇ-ಆಫ್ ವೇಳಾಪಟ್ಟಿ ಇಂತಿದೆ

ಆರ್‌ಸಿಬಿ ಗೆಲುವಿನ ಸಂಪೂರ್ಣ ವರದಿ ಓದಿ

ಆರ್‌ಸಿಬಿ ಗೆಲುವಿನ ರೋಚಕ ಕ್ಷಣ

ಭರತ್-ಮ್ಯಾಕ್ಸ್‌ವೆಲ್ ಅಬ್ಬರ

ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಶ್ರೀಕರ್ ಭರತ್

ಶ್ರೀಕರ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಮೋಘ ಶತಕದ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನಲ್ಲಿ ಶುಕ್ರವಾರ ದುಬೈಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ADVERTISEMENT

ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಶ್ರೀಕರ್ ಭರತ್ ಗೆಲುವಿನ ರೂವಾರಿ ಎನಿಸಿದರು. 51 ಎಸೆತಗಳನ್ನು ಎದುರಿಸಿದ ಭರತ್ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 78 ರನ್ ಗಳಿಸಿ ಅಜೇಯರಾಗುಳಿದರು. 

ಅವರಿಗೆ ತಕ್ಕ ಸಾಥ್ ನೀಡಿದ ಮ್ಯಾಕ್ಸ್‌ವೆಲ್ ಕೇವಲ 33 ಎಸೆತಗಳಲ್ಲಿ ಎಂಟು ಬೌಂಡರಿ ನೆರವಿನಿಂದ 51 ರನ್ ಗಳಿಸಿ ಔಟಾಗದೆ ಉಳಿದರು. 

ಮ್ಯಾಕ್ಸ್‌ವೆಲ್‌ಗೆ ಜೀವದಾನ

ಶ್ರೀಕರ್ ಭರತ್ ಚೊಚ್ಚಲ ಅರ್ಧಶತಕ

ಮ್ಯಾಕ್ಸ್‌ವೆಲ್-ಭರತ್ ಫಿಫ್ಟಿ ಜೊತೆಯಾಟ

ವಿಲಿಯರ್ಸ್ ವಿಕೆಟ್ ಪತನ

ಪವರ್ ಪ್ಲೇ ಅಂತ್ಯಕ್ಕೆ ಆರ್‌ಸಿಬಿ 29/2

ಭರತ್-ವಿಲಿಯರ್ಸ್ ಆಸರೆ

ಕೊಹ್ಲಿ, ದೇವದತ್ತ ವಿಕೆಟ್ ಪತನ

ಸವಾಲಿನ ಮೊತ್ತ ಬೆನ್ನತ್ತಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ತಂಡವು 6 ರನ್ ಗಳಿಸುವದರೆಡೆಗೆ ಆರಂಭಿಕರಾದ ದೇವದತ್ತ ಪಡಿಕ್ಕಲ್ (0) ಹಾಗೂ ನಾಯಕ ವಿರಾಟ್ ಕೊಹ್ಲಿ (4) ವಿಕೆಟ್ ಪತನವಾಯಿತು. 

ಡೆಲ್ಲಿ 164/5

ಆರಂಭಿಕರಾದ ಪೃಥ್ವಿ ಶಾ (48) ಹಾಗೂ ಶಿಖರ್ ಧವನ್ (43) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್‌ನಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. 

ಡೆಲ್ಲಿ 143 ರನ್ನಿಗೆ 4ನೇ ವಿಕೆಟ್ ಪತನ

18 ರನ್ ಗಳಿಸಿದ ಶ್ರೇಯಸ್ ಅಯ್ಯರ್ ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು. 

10 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ ಪಂತ್

48 ರನ್ ಗಳಿಸಿ ಪೃಥ್ವಿ ಶಾ ವಿಕೆಟ್ ಪತನ

ಜೊತೆಯಾಟ ಮುರಿದ ಹರ್ಷಲ್ ಪಟೇಲ್

ಧವನ್-ಪೃಥ್ವಿ ಮೊದಲ ವಿಕೆಟ್‌ಗೆ 88 ರನ್ ಜೊತೆಯಾಟ

ಧವನ್-ಪೃಥ್ವಿ ಅಮೋಘ ಆಟ

10 ಓವರ್ ಅಂತ್ಯಕ್ಕೆ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 88 ರನ್ ಗಳಿಸಿದೆ. 

ಡೆಲ್ಲಿ ಪರ ಧವನ್ 2000 ರನ್ ಸಾಧನೆ

ಫಿಫ್ಟಿ ಜೊತೆಯಾಟ

ಡೆಲ್ಲಿ ಆರಂಭಿಕರ ಉತ್ತಮ ಆಟ

ಪವರ್ ಪ್ಲೇ ಅಂತ್ಯಕ್ಕೆ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 55 ರನ್ ಗಳಿಸಿದೆ. 

ಧವನ್-ಪೃಥ್ವಿ ಬಿರುಸಿನ ಆರಂಭ

ಡೆಲ್ಲಿ ಮೂರು ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ. 

ಪ್ಲೇಯಿಂಗ್-ಇಲೆವೆನ್

ಟಾಸ್ ಝಲಕ್

ಟಾಸ್ ಗೆದ್ದ ಕೊಹ್ಲಿ ಫೀಲ್ಡಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಆರ್‌‍ಸಿಬಿಗೆ ಗೆಲುವಿನ ಗುರಿ

ಕೊಹ್ಲಿ vs ಪಂತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.