ADVERTISEMENT

ಸದ್ಯದಲ್ಲೇ ತಿಲಕ್ ವರ್ಮಾ ಭಾರತದ ಪರ ಆಡಲಿದ್ದಾರೆ: ರೋಹಿತ್ ಶ್ಲಾಘನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 11:13 IST
Last Updated 13 ಮೇ 2022, 11:13 IST
ತಿಲಕ್ ವರ್ಮಾ
ತಿಲಕ್ ವರ್ಮಾ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ಪ್ರಭಾವಿ ಎನಿಸಿರುವಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.

ಈ ಉದಯೋನ್ಮುಖ ಪ್ರತಿಭೆ ಸದ್ಯದಲ್ಲೇ ಎಲ್ಲ ಮಾದರಿಯಲ್ಲೂ ಭಾರತಕ್ಕಾಗಿ ಆಡಲಿದ್ದಾರೆ ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾದ ಕಪ್ತಾನ ಕೂಡ ಆಗಿರುವ ರೋಹಿತ್, ಯುವ ಆಟಗಾರನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

'ತಿಲಕ್ ವರ್ಮಾ ಅತ್ಯುತ್ತಮವಾಗಿ ಆಡಿದ್ದಾರೆ. ಐಪಿಎಲ್‌ನಲ್ಲಿ ಮೊದಲ ವರ್ಷವೇ ತಾಳ್ಮೆಯಿಂದ ಆಡುವುದು ಅಷ್ಟು ಸುಲಭವಲ್ಲ. ನನ್ನ ಪ್ರಕಾರ, ಅವರು ಶೀಘ್ರದಲ್ಲೇ ಎಲ್ಲ ಪ್ರಕಾರದಲ್ಲೂ ಟೀಮ್ ಇಂಡಿಯಾ ಪರ ಆಡಲಿದ್ದಾರೆ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

'ಅವರಿಗೆ (ತಿಲಕ್) ತಂತ್ರಗಾರಿಕೆಯಿದೆ. ಸಂಯಮವಿದೆ. ಅತ್ಯುನ್ನತ ಮಟ್ಟದಲ್ಲಿ ಅದುವೇ ಮುಖ್ಯ. ಅಲ್ಲದೆ ಹಲವಾರು ವಿಚಾರಗಳು ಧನಾತ್ಮಕವಾಗಿ ಕಾಣಿಸುತ್ತಿವೆ. ಅವರೊಂದಿಗೆ ಮಾತನಾಡುವಾಗ ಉತ್ತಮವಾಗಿ ಆಡಬೇಕು, ಪಂದ್ಯವನ್ನು ಗೆಲ್ಲಿಸಬೇಕೆಂಬ ಹಂಬಲ ಕಾಣಿಸುತ್ತದೆ. ಅವರು ಸರಿಯಾದ ದಿಶೆಯತ್ತ ಸಾಗುತ್ತಿದ್ದಾರೆ. ಇದೇ ರೀತಿ ಸುಧಾರಣೆ ಮಾಡಿಕೊಂಡು ಮತ್ತಷ್ಟು ಉತ್ತಮ ಆಟಗಾರನಾಗಿ ಬೆಳೆಯಲು ಪ್ರಯತ್ನಿಸಬೇಕು' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.