ADVERTISEMENT

ಚೆನ್ನೈ-ಮುಂಬೈ ಹಣಾಹಣಿ ಭಾರತ-ಪಾಕ್ ಪಂದ್ಯದಂತೆ ಭಾಸವಾಗುತ್ತಿದೆ: ಹರಭಜನ್

ಐಎಎನ್ಎಸ್
Published 21 ಏಪ್ರಿಲ್ 2022, 14:23 IST
Last Updated 21 ಏಪ್ರಿಲ್ 2022, 14:23 IST
ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)
ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)   

ನವಿ ಮುಂಬೈ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ಭಾರತ ಮತ್ತು ಪಾಕಿಸ್ತಾನದ ನಡುವಣ ಹಣಾಹಣಿಯಂತೆ ಭಾಸವಾಗುತ್ತಿದೆ ಎಂದು ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ಸಲವೂ ಚೆನ್ನೈ ಹಾಗೂ ಮುಂಬೈ ನಡುವಣ ಪಂದ್ಯವು ಅಭಿಮಾನಿಗಳಲ್ಲಿ ರೋಚಕತೆಗೆ ಸಾಕ್ಷಿಯಾಗಿದೆ.

ಐಪಿಎಲ್ ವೃತ್ತಿ ಜೀವನದಲ್ಲಿಹರಭಜನ್ ಸಿಂಗ್, ಮುಂಬೈ ಹಾಗೂ ಚೆನ್ನೈ ತಂಡದ ಪರ ಆಡಿದ್ದಾರೆ. 2008ರಿಂದ 2017ರ ವರೆಗೆ ಮುಂಬೈ ತಂಡದ ಅವಿಭಾಜ್ಯ ಅಂಗವಾಗಿದ್ದ ಹರಭಜನ್ 2018ರಲ್ಲಿ ಚೆನ್ನೈ ತಂಡದೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಂಡಿದ್ದರು.

'ಮುಂಬೈ ಡ್ರೆಸ್ಸಿಂಗ್ ರೂಮ್‌ನಲ್ಲಿ 10 ವರ್ಷಗಳ ಕಾಲ ಇದ್ದ ನಾನು ಮೊದಲ ಬಾರಿಗೆ ಸಿಎಸ್‌ಕೆ ಜೆರ್ಸಿ ಧರಿಸಿದಾಗ ವಿಚಿತ್ರವೆನಿಸಿತು. ಎರಡು ತಂಡಗಳ ನಡುವಣ ಪೈಪೋಟಿ ಹಾಗೂ ಸ್ಪರ್ಧೆಯ ಮಟ್ಟವು ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಭಾವನೆಯನ್ನು ನೀಡುತ್ತದೆ' ಎಂದು ಹರಭಜನ್ ಹೇಳಿದ್ದಾರೆ.

'ಮುಂಬೈ ವಿರುದ್ಧ ನಾನು ಮೊದಲ ಬಾರಿಗೆ ಮೈದಾನಕ್ಕಿಳಿದಾಗ ಹೆಚ್ಚಿನ ಒತ್ತಡ ಹಾಗೂ ಭಾವನಾತ್ಮಕ ಅಂಶ ಒಳಗೊಂಡಿದ್ದರಿಂದ ಪಂದ್ಯ ಬೇಗನೇ ಮುಗಿಯಲಿ ಎಂದು ಪ್ರಾರ್ಥಿಸಿದ್ದೆ. ಅದೃಷ್ಟವಶಾತ್ ಆ ಪಂದ್ಯ ಬೇಗನೇ ಕೊನೆಗೊಂಡಿತ್ತು. ಚೆನ್ನೈ ತಂಡವು ಪಂದ್ಯವನ್ನು ಗೆದ್ದಿತ್ತು' ಎಂದು ಹರಭಜನ್ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.