ADVERTISEMENT

IPL 2022 GT vs PBKS: ಗುಜರಾತ್ ಟೈಟನ್ಸ್‌ ಓಟಕ್ಕೆ ಕಿಂಗ್ಸ್ ಸವಾಲು

ಲಿವಿಂಗ್‌ಸ್ಟೋನ್, ಫರ್ಗ್ಯುಸನ್ ಜಿದ್ದಾಜಿದ್ದಿ ನಿರೀಕ್ಷೆ

ಪಿಟಿಐ
Published 7 ಏಪ್ರಿಲ್ 2022, 23:30 IST
Last Updated 7 ಏಪ್ರಿಲ್ 2022, 23:30 IST
ಲಿಯಾಮ್ ಲಿವಿಂಗ್‌ಸ್ಟೋನ್  
ಲಿಯಾಮ್ ಲಿವಿಂಗ್‌ಸ್ಟೋನ್     

ಮುಂಬೈ: ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಆತ್ಮವಿಶ್ವಾಸಭರಿತ ಮಯಂಕ್ ಅಗರವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಎದುರು ಶುಕ್ರವಾರ ಕಣಕ್ಕಿಳಿಯಲಿದೆ.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಗುಜರಾತ್ ತಂಡದ ಬೌಲರ್ ಲಾಗಿ ಫರ್ಗ್ಯುಸನ್ ಅವರ ನಡುವೆ ಜಿದ್ದಾಜಿದ್ದಿನ ಪೈಪೋಟಿಯ ನಿರೀಕ್ಷೆ ಇದೆ. ಚೆನ್ನೈ ತಂಡದ ಎದುರಿನ ಪಂದ್ಯದಲ್ಲಿ ಲಿಯಾಮ್ ಮಿಂಚಿನ ಅರ್ಧಶತಕ ಬಾರಿಸಿ, ಎರಡು ವಿಕೆಟ್‌ ಕೂಡ ಗಳಿಸಿದ್ದರು. ಫರ್ಗ್ಯುಸನ್ ಡೆಲ್ಲಿ ಎದುರಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿ ಮಿಂಚಿದ್ದರು.

ಗುಜರಾತ್ ತಂಡದಲ್ಲಿ ಫರ್ಗ್ಯುಸನ್ ಮತ್ತು ಮೊಹಮ್ಮದ್ ಶಮಿ ಅವರನ್ನೊಳಗೊಂಡ ಉತ್ತಮ ಬೌಲಿಂಗ್ ಪಡೆ ಇದೆ. ಸ್ಪಿನ್ನರ್ ರಶೀದ್ ಖಾನ್ ಮತ್ತು ವರುಣ್ ಆ್ಯರನ್ ಅವರ ಜೊತೆಗೆ ಇದ್ದಾರೆ. ಬ್ಯಾಟರ್‌ಗಳಾದ ರಾಹುಲ್ ತೆವಾಟಿಯಾ, ಮ್ಯಾಥ್ಯೂ ವೇಡ್, ಶುಭಮನ್ ಗಿಲ್ ಅವರೂ ಉತ್ತಮ ಲಯದಲ್ಲಿದ್ದಾರೆ. ಅದರಿಂದಾಗಿ ಗೆಲುವಿನ ಓಟ ಮುಂದುವರಿಸುವ ಛಲದಲ್ಲಿದೆ.

ADVERTISEMENT

ಆದರೆ ಮೂರು ಪಂದ್ಯಗಳನ್ನು ಆಡಿ ಎರಡರಲ್ಲಿ ಜಯಿಸಿರುವ ಪಂಜಾಬ್ ಕಿಂಗ್ಸ್ ಕೂಡ ಸಮತೋಲನ ತಂಡವನ್ನು ಹೊಂದಿದೆ. ಬ್ಯಾಟರ್ ಮಯಂಕ್, ಶಿಖರ್ ಧವನ್, ಶಾರೂಖ್ ಖಾನ್, ಆಲ್‌ರೌಂಡರ್ ಒಡೀನ್ ಸ್ಮಿತ್, ಭನುಕಾ ರಾಜಪಕ್ಸ ಮತ್ತು ಕಗಿಸೊ ರಬಾಡ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಬಲ್ಲ ಸಮರ್ಥರಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಮಣಿಸಿರುವ ಹುಮ್ಮಸ್ಸಿನಲ್ಲಿರುವ ಪಂಜಾಬ್ ತಂಡವು ಹಾರ್ದಿಕ್ ಬಳಕ್ಕೆ ದಿಟ್ಟ ಪೈಪೋಟಿಯೊಡ್ಡಲು ಸಿದ್ಧವಾಗಿದೆ.

ಪಂದ್ಯ ಆರಂಭ: ರಾತ್ರಿ 7.30ರಿಂದ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.