ADVERTISEMENT

IPL 2022: ಧೋನಿ, ರೋಹಿತ್ ಹಿಂದಿಕ್ಕಿ ಸಚಿನ್ ಸಾಧನೆ ಸರಿಗಟ್ಟಿದ ಗಾಯಕವಾಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 11:16 IST
Last Updated 2 ಮೇ 2022, 11:16 IST
ಋತುರಾಜ್ ಗಾಯಕವಾಡ್
ಋತುರಾಜ್ ಗಾಯಕವಾಡ್   

ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕವಾಡ್, 1,000 ರನ್‌ಗಳ ಸಾಧನೆ ಮಾಡಿದ್ದಾರೆ.

ಈ ಮೂಲಕ ಐಪಿಎಲ್‌ನಲ್ಲಿ ವೇಗದ ಸಹಸ್ರ ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

31ನೇ ಇನ್ನಿಂಗ್ಸ್‌ನಲ್ಲಿ ಗಾಯಕವಾಡ್ ಸಹಸ್ರ ರನ್ ಸಾಧನೆ ಮಾಡಿದ್ದಾರೆ. ಈ ಮೂಲಕ ಸಚಿನ್ ದಾಖಲೆ ಸರಿಗಟ್ಟಿದ್ದಾರೆ. ಅಲ್ಲದೆ ಸುರೇಶ್ ರೈನಾ (34 ಇನ್ನಿಂಗ್ಸ್), ದೇವದತ್ತ ಪಡಿಕ್ಕಲ್ (35), ರಿಷಭ್ ಪಂತ್ (35), ಗೌತಮ್ ಗಂಭೀರ್ (36), ರೋಹಿತ್ ಶರ್ಮಾ (37), ಮಹೇಂದ್ರ ಸಿಂಗ್ ಧೋನಿ (37) ಹಾಗೂ ಅಜಿಂಕ್ಯ ರಹಾನೆ (37)ಸಾಧನೆಯನ್ನು ಹಿಮ್ಮೆಟ್ಟಿಸಿದ್ದಾರೆ.

ಚೆನ್ನೈ ಪರ ಮೊದಲ ವಿಕೆಟ್‌ಗೆ ಗರಿಷ್ಠ ರನ್ ಜೊತೆಯಾಟ...
ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಆರಂಭಿಕರಾದ ಋತುರಾಜ್ ಗಾಯಕವಾಡ್ ಹಾಗೂ ಡೆವೊನ್ ಕಾನ್ವೆ ಮೊದಲ ವಿಕೆಟ್‌ಗೆ 182 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇದು ಐಪಿಎಲ್ ಇತಿಹಾಸದಲ್ಲಿ ಮೊದಲ ವಿಕೆಟ್‌ಗೆ ದಾಖಲಾದ ನಾಲ್ಕನೇ ಗರಿಷ್ಠ ಜೊತೆಯಾಟವಾಗಿದೆ.

ಹಾಗೆಯೇ ಚೆನ್ನೈ ಪರ ಮೊದಲ ವಿಕೆಟ್‌ಗೆ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.

ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ಜೊತೆಯಾಟ:
185 ರನ್ (2019): ಜಾನಿ ಬೆಸ್ಟೊ/ಡೇವಿಡ್ ವಾರ್ನರ್ (ಎಸ್‌ಆರ್‌ಎಚ್ vs ಆರ್‌ಸಿಬಿ)
184* ರನ್ (2017): ಗೌತಮ್ ಗಂಭೀರ್/ಕ್ರಿಸ್ ಲಿನ್ (ಕೆಕೆಆರ್ vs ಗುಜರಾತ್ ಲಯನ್ಸ್)
183 ರನ್ (2020): ಕೆ.ಎಲ್. ರಾಹುಲ್/ಮಯಂಕ್ ಅಗರವಾಲ್ (ಪಂಜಾಬ್ vs ರಾಜಸ್ಥಾನ್)
182 ರನ್ (2022): ಋತುರಾಜ್ ಗಾಯಕವಾಡ್/ಡೆವೊನ್ ಕಾನ್ವೆ (ಸಿಎಸ್‌ಕೆ vs ಎಸ್‌ಆರ್‌ಎಚ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.