ADVERTISEMENT

ಐಪಿಎಲ್‌ ಮಿನಿ ಹರಾಜು: ಮಯಂಕ್‌, ಮನೀಷ್‌ಗೆ ₹1 ಕೋಟಿ ಮೂಲಬೆಲೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 9:09 IST
Last Updated 23 ಡಿಸೆಂಬರ್ 2022, 9:09 IST
ಮನೀಷ್‌ ಪಾಂಡೆ ಹಾಗೂ ಮಯಂಕ್‌ ಅಗರವಾಲ್
ಮನೀಷ್‌ ಪಾಂಡೆ ಹಾಗೂ ಮಯಂಕ್‌ ಅಗರವಾಲ್   

ಕೊಚ್ಚಿ:ಐಪಿಎಲ್‌ ಮಿನಿ ಹರಾಜು ಪಟ್ಟಿಯಲ್ಲಿರುವ ಕರ್ನಾಟಕದ ಆಟಗಾರರಲ್ಲಿ ಮಯಂಕ್‌ ಅಗರವಾಲ್‌ ಮತ್ತು ಮನೀಷ್‌ ಪಾಂಡೆ ಅವರು ತಮಗೆ ₹ 1 ಕೋಟಿ ಮೂಲ ಬೆಲೆ ನಿಗದಿಪಡಿಸಿದ್ದಾರೆ.

ರಾಜ್ಯ ರಣಜಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಕರುಣ್‌ ನಾಯರ್‌ (₹50 ಲಕ್ಷ ಮೂಲಬೆಲೆ) ಅವರ ಖರೀದಿಗೆ ಫ್ರಾಂಚೈಸ್‌ಗಳು ಮುಂದಾಗುವುದೇ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಆಟಗಾರರಾದ ಶ್ರೇಯಸ್‌ ಗೋಪಾಲ್‌, ಮನೋಜ್‌ ಭಾಂಡಗೆ, ಜೆ.ಸುಚಿತ್‌, ಲವನೀತ್ ಸಿಸೋಡಿಯಾ, ವಿದ್ವತ್‌ ಕಾವೇರಪ್ಪ, ವೈಶಾಖ್‌ ವಿಜಯಕುಮಾರ್, ಬಿ.ಆರ್‌.ಶರತ್‌, ವಿ.ಕೌಶಿಕ್ ಮತ್ತು ಶುಭಾಂಗ್‌ ಹೆಗ್ಡೆ ಅವರೂ ಕಣದಲ್ಲಿದ್ಧಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.