ADVERTISEMENT

IPL 2024: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ; ಗೆದ್ದು ಬೀಗಿದ ಎಸ್‌ಆರ್‌ಎಚ್ ‌

ಪಿಟಿಐ
Published 27 ಮಾರ್ಚ್ 2024, 18:30 IST
Last Updated 27 ಮಾರ್ಚ್ 2024, 18:30 IST
ಪ್ಯಾಟ್‌ ಕಮಿನ್ಸ್‌ , ಪಾಂಡ್ಯ
ಪ್ಯಾಟ್‌ ಕಮಿನ್ಸ್‌ , ಪಾಂಡ್ಯ   

ಹೈದರಾಬಾದ್: ಇಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 277 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು 31 ರನ್‌ಗಳ ಗೆಲುವು ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಹೈದರಾಬಾದ್ ತಂಡದ ಬ್ಯಾಟರ್‌ಗಳು ಭರ್ಜರಿ ಬ್ಯಾಟಿಂಗ್ ನಡೆಸಿದರು. 16 ಎಸತಗಳಲ್ಲಿ ಅರ್ಧಶತಕ ದಾಖಲಿಸಿದ ಅಭಿಷೇಕ್ ಶರ್ಮಾ ಒಟ್ಟು 23 ಎಸೆತಗಳಲ್ಲಿ 63 ರನ್ ಸಿಡಿಸಿದರು. ಇದರಲ್ಲಿ 7 ಸಿಕ್ಸರ್ ಮತ್ತು 3 ಬೌಂಡರಿಗಳಿದ್ದವು.

ಟ್ರಾವೆಸ್ ಹೆಡ್ ಸಹ 24 ಎಸೆತಗಳಲ್ಲಿ 62 ರನ್ ಗಳಿಸಿ ಅಬ್ಬರಿಸಿದರು. ಬಳಿಕ, ನಾಯಕ ಮರ್ಕರಂ ಔಟಾಗದೆ 42 ರನ್ ಮತ್ತು ಕಳೆದ ಪಂದ್ಯದಲ್ಲಿ ತಮ್ಮ ಸ್ಫೋಟಕ ಆಟದ ಮೂಲಕ ಗಮನ ಸೆಳೆದಿದ್ದ ಕ್ಲಾಸೆನ್ ಔಟಾಗದೆ 80 ರನ್ ಸಿಡಿಸಿದರು. ಈ ಮೂಲಕ ಐಪಿಎಲ್ ಇಂತಿಹಾಸದಲ್ಲೇ ಅತ್ಯಧಿಕ ಮೊತ್ತವನ್ನು ಹೈದರಾಬಾದ್ ಕಲೆ ಹಾಕಿತು.

ADVERTISEMENT

ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈಗೆ ರೋಹಿತ್ ಶರ್ಮಾ(24) ಮತ್ತು

ಇಶಾನ್ ಕಿಶನ್(36) ಉತ್ತಮ ಆರಂಭ ನೀಡಿದರು. ಬಳಿಕ ನಮನ್‌ 30, ತಿಲಕ್‌ ವರ್ಮಾ 64, ಹಾರ್ದಿಕ್‌ 24 ಮತ್ತು ಟಿಮ್‌ ಡೇವಿಸ್‌ ಔಟಾಗದೆ 42 ರನ್ ರನ್ ಗಳಿಸಿದರಾದರೂ ತಂಡದ ಸೋಲನ್ನು ತಪ್ಪಿಸಲಾಗಲಿಲ್ಲ. 20 ಓವರ್ ಅಂತ್ಯಕ್ಕೆ ಮುಂಬೈ 5 ವಿಕೆಟ್ ಕಳೆದುಕೊಂಡು 246 ರನ್ ಗಳಿಸಲಷ್ಟೇ ಶಕ್ತವಾಯಿತು.

ಸ್ಕೋರ್‌ ಕಾರ್ಡ್‌

ಸನ್‌ರೈಸರ್ಸ್‌ ಹೈದರಾಬಾದ್‌

20 ಓವರ್‌ಗಳಲ್ಲಿ 3ಕ್ಕೆ 277

ಮಯಂಕ್‌ ಸಿ ಡೇವಿಡ್‌ ಬಿ ಪಾಂಡ್ಯ 11 (13ಎ, 4x1)

ಟ್ರಾವಿಸ್‌ ಸಿ ನಮನ್‌ ಬಿ ಕೋಟ್ಜಿ 62 (24ಎ, 4x9, 6x3)

ಅಭಿಷೇಕ್‌ ಸಿ ನಮನ್‌ ಬಿ ಷಿಯೂಷ್‌ 63 (23ಎ, 4x3, 6x7)

ಐಡೆನ್‌ ಮರ್ಕರಂ ಔಟಾಗದೆ 42 (28ಎ, 4x2, 6x1)

ಹೆನ್ರಿಚ್‌ ಕ್ಲಾಸೆನ್‌ ಔಟಾಗದೆ 80 (34ಎ, 4x4, 6x7)

ಇತರೆ: 19 (ಬೈ 4, ಲೆಗ್‌ಬೈ 1, ನೋಬಾಲ್‌ 2, ವೈಡ್‌ 12)

ವಿಕೆಟ್‌ ಪತನ: 1-45 (ಮಯಂಕ್ ಅಗರವಾಲ್; 4.1), 2-113 (ಟ್ರಾವಿಸ್ ಹೆಡ್;7.5), 3-161 (ಅಭಿಷೇಕ್ ಶರ್ಮಾ; 10.6)

ಬೌಲಿಂಗ್‌:

ಕ್ವೆನಾ ಮಫಕಾ 4–0–66–0, ಹಾರ್ದಿಕ್‌ ಪಾಂಡ್ಯ 4–0–46–1, ಜಸ್‌ಪ್ರೀತ್‌ ಬೂಮ್ರಾ 4–0–36–0, ಜೆರಾಲ್ಡ್ ಕೋಟ್ಜಿ 4–0–57–1, ಷಿಯೂಷ್‌ ಚಾವ್ಲಾ 2–0–34–1, ಶಮ್ಸ್ ಮುಲಾನಿ 2–0–33–0

ಮುಂಬೈ ಇಂಡಿಯನ್ಸ್‌

20 ಓವರ್‌ಗಳಲ್ಲಿ 5ಕ್ಕೆ 246

ರೋಹಿತ್‌ ಸಿ ಅಭಿಷೇಕ್‌ ಬಿ ಕಮಿನ್ಸ್‌ 26 (12ಎ, 4x1, 6x3)

ಇಶಾನ್‌ ಸಿ ಮರ್ಕರಂ 34 (13ಎ, 4x2, 6x4)

ನಮನ್‌ ಸಿ ಕಮಿನ್ಸ್‌ ಬಿ ಉನದ್ಕತ್ 30 (14ಎ, 4x2, 6x2)

ತಿಲಕ್‌ ಸಿ ಅಗರವಲ್‌ ಸಿ ಕಮಿನ್ಸ್ 64 (34ಎ, 4x2, 6x6)

ಹಾರ್ದಿಕ್‌ ಸಿ ಕ್ಲಾಸೆನ್‌ ಬಿ ಉನದ್ಕತ್ 24 (20ಎ, 4x1, 6x1)

ಟಿಮ್‌ ಡೇವಿಸ್‌ ಔಟಾಗದೆ 42 (22ಎ, 4x2, 6x3)

ರೊಮಾರಿಯೋ ಶೆಫರ್ಡ್ ಔಟಾಗದೆ 15 (6ಎ, 4x2, 6x1)

ಇತರೆ: 11 (ಬೈ 1, ಲೆಗ್‌ಬೈ 4, ನೋಬಾಲ್‌ 1, ವೈಡ್‌ 5)

ವಿಕೆಟ್‌ ಪತನ: 1-56 (ಇಶಾನ್ ಕಿಶನ್; 3.2), 2-66 (ರೋಹಿತ್ ಶರ್ಮಾ; 4.3), 3-150 (ನಮನ್ ಧೀರ್; 10.4), 4-182 (ತಿಲಕ್ ವರ್ಮಾ; 14.1), 5–224 (ಹಾರ್ದಿಕ್‌ ಪಾಂಡ್ಯ;17.6)

ಬೌಲಿಂಗ್‌: ಭುವನೇಶ್ವರ ಕುಮಾರ್ 4–0–53–0, ಜಯದೇವ್ ಉನದ್ಕತ್ 4–0–47–2, ಶಹಬಾಜ್ ಅಹಮದ್ 3–0–39–1, ಪ್ಯಾಟ್‌ ಕಮಿನ್ಸ್‌ 4–0–35–2, ಉಮ್ರಾನ್ ಮಲಿಕ್ 1–0–15–0, ಮಯಂಕ್ ಮಾರ್ಕಂಡೆ 4–0–52–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.