ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ರಾಜಸ್ಥಾನ ರಾಯಲ್ಸ್ 20 ರನ್ಗಳಿಂದ ಜಯಿಸಿತು.
ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು.
ರಾಜಸ್ಥಾನ್ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 193 ರನ್ಗಳಿಸಿತು. ಸಂಜು 82 ರನ್ ಬಾರಿಸಿ ಅಜೇಯರಾದರು. ರಿಯಾನ್ ಪರಾಗ್ 44 ರನ್ ಗಳಿಸಿದರು. ಲಖನೌ ಪರವಾಗಿ ನವೀನ್ ಉಲ್ ಹಕ್ 2 ವಿಕೆಟ್ ಕಬಳಿಸಿದರು.
194 ರನ್ಗಳ ಗುರಿ ಬೆನ್ನಟ್ಟಿದ ಲಖನೌ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಮಾತ್ರ ಗಳಿಸಿತು. ಲಖನೌ ಪರವಾಗಿ ರಾಹುಲ್ 58, ಪೂರನ್ 64 ರನ್ ಗಳಿಸಿದರು. ರಾಜಸ್ಥಾನ ಪರ ಬೌಲ್ಟ್ 2 ವಿಕೆಟ್ ಪಡೆದರು.
ಸ್ಕೋರ್
ರಾಜಸ್ಥಾನ: 193-4 (20)
ಲಖನೌ: 173-6 (20)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.