ADVERTISEMENT

IPL–2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೆವಿನ್ ಪೀಟರ್ಸನ್ ಮೆಂಟರ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 1:26 IST
Last Updated 28 ಫೆಬ್ರುವರಿ 2025, 1:26 IST
ಕೆವಿನ್ ಪೀಟರ್ಸನ್
ಕೆವಿನ್ ಪೀಟರ್ಸನ್   

ನವದೆಹಲಿ: ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಮುಂಬರುವ  ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೆಂಟರ್‌ ಆಗಿ ಗುರುವಾರ  ಸೇರ್ಪಡೆಯಾದರು.

44 ವರ್ಷ ವಯಸ್ಸಿನ ಪೀಟರ್ಸನ್‌, ಈ ಹಿಂದೆ 2014ರಲ್ಲಿ ಆಗಿನ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ನಾಯಕ ರಾಗಿದ್ದರು. 2016ರಲ್ಲಿ ಅವರು ಕೊನೆಯ ಬಾರಿ ಐಪಿಎಲ್‌ನಲ್ಲಿ ಆಡಿದ್ದರು.

‘ತವರು ಡೆಲ್ಲಿ ತಂಡಕ್ಕೆ ಮರಳಲು ಖುಷಿಯಾಗುತ್ತಿದೆ! ಡೆಲ್ಲಿ ತಂಡದ ಜೊತೆ ನನಗೆ ಸವಿನೆನಪುಗಳಿವೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ADVERTISEMENT

ಡೆಲ್ಲಿ ಇದುವರೆಗೆ ಪ್ರಶಸ್ತಿ ಗೆದ್ದಿಲ್ಲ. ಒಮ್ಮೆ ಫೈನಲ್ ತಲಪಿತ್ತು. ಈ ಹಿಂದಿನ ಆವೃತ್ತಿಯಲ್ಲಿ ಆರನೇ ಸ್ಥಾನ ಗಳಿಸಿತ್ತು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಾರ್ಚ್‌ 22ರಂದು ಆರಂಭವಾಗುವ ಈ ಬಾರಿಯ ಆವೃತ್ತಿಗೆ ಇದುವರೆಗೆ ನಾಯಕನನ್ನು ಹೆಸರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.