ADVERTISEMENT

ಐಪಿಎಲ್: ಎಲ್‌ಎಸ್‌ಜಿ ತಂಡದ ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ಟಾಮ್ ಮೂಡಿ ನೇಮಕ

ಪಿಟಿಐ
Published 4 ನವೆಂಬರ್ 2025, 7:20 IST
Last Updated 4 ನವೆಂಬರ್ 2025, 7:20 IST
<div class="paragraphs"><p>ಟಾಮ್ ಮೂಡಿ</p></div>

ಟಾಮ್ ಮೂಡಿ

   

ಚಿತ್ರ: @LucknowIPL

ಲಖನೌ: ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಅವರನ್ನು ತಮ್ಮ ಜಾಗತಿಕ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಿರುವುದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡವಾಗಿರುವ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಂಗಳವಾರ ಮಾಹಿತಿ ನೀಡಿದೆ.

ADVERTISEMENT

60 ವರ್ಷದ ಟಾಮ್ ಮೂಡಿ ಅವರು ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿ ಎರಡು ಬಾರಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. 2022 ರಲ್ಲಿ ಸನ್‌ರೈಸರ್ಸ್ ತಂಡಕ್ಕೆ ಬ್ರಿಯಾನ್ ಲಾರಾ ಮುಖ್ಯ ಕೋಚ್ ಆದ ಬಳಿಕ ಮೂಡಿ ಫ್ರಾಂಚೈಸಿಯನ್ನು ತೊರೆದಿದ್ದರು.

ಎಲ್‌ಎಸ್‌ಜಿ ತನ್ನ ಎಕ್ಸ್ ಖಾತೆಯಲ್ಲಿ, ‘ಅನುಭವ. ದೂರದೃಷ್ಟಿ. ನಾಯಕತ್ವ. ಸೂಪರ್ ಜೈಂಟ್ಸ್ ಯೂನಿವರ್ಸ್‌ಗೆ ಸ್ವಾಗತ ಟಾಮ್ ಮೂಡಿ!’ ಎಂಬ ಶೀರ್ಷಿಕೆಯೊಂದಿಗೆ ಮೂಡಿ ಅವರ ಭಾವಚಿತ್ರವನ್ನು ಪೋಸ್ಟ್ ಮಾಡಿದೆ.

ಟಾಮ್ ಮೂಡಿ ಅವರು ಆಸ್ಟ್ರೇಲಿಯಾ ಪರ 8 ಟೆಸ್ಟ್ ಮತ್ತು 76 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 1,667 ರನ್ ಗಳಿಸಿದ್ದಾರೆ ಮತ್ತು ಎರಡೂ ಸ್ವರೂಪಗಳಿಂದ 54 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.