ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ಬೆಂಗಳೂರು: 2025ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳು ಚೊಚ್ಚಲ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ರನ್ ಬೇಟೆಯಲ್ಲಿ ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಮುಂದಿದ್ದಾರೆ. ಸಾಯಿ ಸುದರ್ಶನ್ 15 ಪಂದ್ಯಗಳಲ್ಲಿ ಒಟ್ಟು 759 ರನ್ ಪೇರಿಸಿದ್ದಾರೆ.
ಫೈನಲ್‌ಗೆ ಪ್ರವೇಶಿಸಿದ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಾರೆ ವಿರಾಟ್ ಕೊಹ್ಲಿ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಪ್ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅನುಕ್ರಮವಾಗಿ 614 ಹಾಗೂ 603 ರನ್ ಗಳಿಸಿದ್ದಾರೆ.
ಕೊಹ್ಲಿ ಹಾಗೂ ಅಯ್ಯರ್‌ಗೆ ಅಗ್ರಸ್ಥಾನ ಪಡೆಯುವುದು ಬಹುತೇ ಕಷ್ಟವಾಗಿದ್ದರಿಂದ ಆರೆಂಜ್ ಕ್ಯಾಪ್ ಸುದರ್ಶನ್ ಬಳಿಯೇ ಉಳಿದುಕೊಳ್ಳುವ ಸಾಧ್ಯತೆಯಿದೆ. ಆದರೂ ಫೈನಲ್ ಪಂದ್ಯದಲ್ಲಿ ಅವರಿಬ್ಬರ ಮಧ್ಯೆ ನಿಕಟ ಪೈಪೋಟಿ ಏರ್ಪಡುವ ನಿರೀಕ್ಷೆಯಿದೆ.
ಅತ್ತ ಅತಿ ಹೆಚ್ಚು ವಿಕೆಟ್‌ಗಳನ್ನು ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲೂ ಗುಜರಾತ್ ಟೈಟನ್ಸ್ ತಂಡದವರೇ ಆದ ಕನ್ನಡಿಗ ಪ್ರಸಿದ್ಧ ಕೃಷ್ಣ ಮುಂಚೂಣಿಯಲ್ಲಿದ್ದಾರೆ. ಪ್ರಸಿದ್ಧ 15 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಆರ್‌ಸಿಬಿಯ ಜೋಶ್ ಹ್ಯಾಜಲ್‌ವುಡ್ 11 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಗಳಿಸಿದ್ದಾರೆ. ಹಾಗೊಂದು ವೇಳೆ ಫೈನಲ್ ಪಂದ್ಯದಲ್ಲಿ ಐದರ ಗೊಂಚಲು ಪಡೆದರೆ, ಪರ್ಪಲ್ ಕ್ಯಾಪ್ ಧರಿಸುವ ಅವಕಾಶ ಇರಲಿದೆ.
ಇನ್ನು ಪಂಜಾಬ್ ತಂಡದ ಪೈಕಿ ಟಾಪ್ 10ರ ಪಟ್ಟಿಯಲ್ಲಿರುವ ಅರ್ಷದೀಪ್ ಸಿಂಗ್ 16 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಐಪಿಎಲ್ 2025ರಲ್ಲಿ ಅತಿ ಹೆಚ್ಚು ರನ್ ಸಾಧಕರು (ಆರೆಂಜ್ ಕ್ಯಾಪ್):
1. ಸಾಯಿ ಸುದರ್ಶನ್ (ಗುಜರಾತ್ ಟೈಟನ್ಸ್): 759
2. ಸೂರ್ಯ ಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್): 717
3. ಶುಭಮನ್ ಗಿಲ್ (ಗುಜರಾತ್ ಟೈಟನ್ಸ್): 650
4. ಮಿಚೆಲ್ ಮಾರ್ಷ್ (ಲಖನೌ ಸೂಪರ್ ಜೈಂಟ್ಸ್): 627
5. ವಿರಾಟ್ ಕೊಹ್ಲಿ (ಆರ್‌ಸಿಬಿ): : 614
6. ಶ್ರೇಯಸ್ ಅಯ್ಯರ್ (ಪಂಜಾಬ್ ಕಿಂಗ್ಸ್): : 603
7. ಯಶಸ್ವಿ ಜೈಸ್ವಾಲ್ (ಪಂಜಾಬ್ ಕಿಂಗ್ಸ್): 559
8. ಕೆ.ಎಲ್. ರಾಹುಲ್ (ಡೆಲ್ಲಿ ಕ್ಯಾಪಿಟಲ್ಸ್): 539
9. ಜೋಸ್ ಬಟ್ಲರ್ (ಗುಜರಾತ್ ಟೈಟನ್ಸ್): 538
10. ನಿಕೋಲಸ್ ಪೂರನ್ (ಲಖನೌ ಸೂಪರ್ ಜೈಂಟ್ಸ್): 524
ಐಪಿಎಲ್ 2025ರಲ್ಲಿ ಅತಿ ಹೆಚ್ಚು ವಿಕೆಟ್ ಸಾಧಕರು (ಪರ್ಪಲ್ ಕ್ಯಾಪ್)
1. ಪ್ರಸಿದ್ಧ ಕೃಷ್ಣ (ಗುಜರಾತ್ ಟೈಟನ್ಸ್): 25 ವಿಕೆಟ್
2. ನೂರ್ ಅಹ್ಮದ್ (ಸಿಎಸ್‌ಕೆ): 24 ವಿಕೆಟ್
3. ಟ್ರೆಂಟ್ ಬೌಲ್ಟ್ (ಮುಂಬೈ ಇಂಡಿಯನ್ಸ್): 22 ವಿಕೆಟ್
4. ಜೋಶ್ ಹ್ಯಾಜಲ್‌ವುಡ್ (ಆರ್‌ಸಿಬಿ): 21 ವಿಕೆಟ್
5. ಸಾಯಿ ಕಿಶೋರ್ (ಗುಜರಾತ್ ಟೈಟನ್ಸ್): 19 ವಿಕೆಟ್
6. ಜಸ್‌ಪ್ರೀತ್ ಬೂಮ್ರಾ (ಮುಂಬೈ ಇಂಡಿಯನ್ಸ್): 18 ವಿಕೆಟ್
7. ಅರ್ಷದೀಪ್ ಸಿಂಗ್ (ಪಂಜಾಬ್ ಕಿಂಗ್ಸ್): 18 ವಿಕೆಟ್
8. ವರುಣ್ ಚಕ್ರವರ್ತಿ (ಕೆಕೆಆರ್): 17 ವಿಕೆಟ್
9. ವೈಭವ್ ಅರೋರಾ (ಕೆಕೆಆರ್): 17 ವಿಕೆಟ್
10. ಪ್ಯಾಟ್ ಕಮಿನ್ಸ್ (ಎಸ್‌ಆರ್‌ಎಚ್): 16 ವಿಕೆಟ್
*ಫೈನಲ್ ಪಂದ್ಯದ ಬಳಿಕ ಈ ಪಟ್ಟಿಯಲ್ಲಿ ಅಲ್ಪ ಬದಲಾವಣೆ ಕಂಡುಬರಲಿದೆ. ಗುಜರಾತ್‌ನ ಅಹಮದಾಬಾದ್ ಸ್ಟೇಡಿಯಂನಲ್ಲಿ ನಾಳೆ (ಮಂಗಳವಾರ) ಫೈನಲ್ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.