
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಮಿನಿ ಹರಾಜಿನಲ್ಲಿ ಭಾರತದ ಪ್ರಮುಖ ಟಿ–20 ಬೌಲರ್ ರವಿ ಬಿಷ್ಣೋಯಿ ಅವರನ್ನು ₹7.2 ಕೋಟಿಗೆ ರಾಜಸ್ಥಾನ ರಾಯಲ್ಸ್ ತಂಡವು ಖರೀದಿಸಿದೆ.
ಟಿ-20 ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಭಾರತದ ಏಕೈಕ ಸ್ಪಿನ್ನರ್ ಆಗಿರುವ ರವಿ ಬಿಷ್ಣೋಯಿ ಅವರನ್ನು ಕೊಂಡುಕೊಳ್ಳಲು ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪೈಪೋಟಿ ನಡೆಸಿದವು.
ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು 2025ರಲ್ಲಿ ಲಖನೌ ಸೂಪರ್‌ಜೆಂಟ್ಸ್ ತಂಡವು ₹11 ಕೋಟಿ ಕೊಟ್ಟು ಖರೀದಿಸಿತ್ತು.
ಐಪಿಎಲ್‌ನಲ್ಲಿ ಪಂಜಾಬ್, ಎಲ್‌ಎಸ್‌ಜಿ ಪರ ಆಡಿರುವ ರವಿ ಬಿಷ್ಣೋಯಿ ಅವರು 77 ಪಂದ್ಯಗಳಿಂದ 72 ವಿಕೆಟ್ ಪಡೆದಿದ್ದಾರೆ. 42 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 61 ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.