ADVERTISEMENT

ಐಪಿಎಲ್ ಮೆಗಾ ಹರಾಜು ಇಂದಿನಿಂದ: ಮರುಭೂಮಿಯಲ್ಲಿ ಪಂತ್‌ಗೆ ಒಲಿಯುವುದೇ ಜಾಕ್‌ಪಾಟ್

ರಾಹುಲ್, ಶ್ರೇಯಸ್ ಮೇಲೆ ಕಣ್ಣು l ಪೈಪೋಟಿಯಲ್ಲಿ ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ

ಪಿಟಿಐ
Published 23 ನವೆಂಬರ್ 2024, 20:55 IST
Last Updated 23 ನವೆಂಬರ್ 2024, 20:55 IST
   

ಜೆದ್ದಾ, ಸೌದಿ ಅರೇಬಿಯಾ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಗೆ ಮರುಭೂಮಿ ನಾಡಿನ ನಗರಿ ಸಿದ್ಧವಾಗಿದೆ. ದೆಹಲಿ ಹುಡುಗ ರಿಷಭ್ ಪಂತ್  ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. 

ಭಾನುವಾರ ಮತ್ತು ಸೋಮವಾರ ಇಲ್ಲಿ ಮುಂದಿನ ವರ್ಷದ ಐಪಿಎಲ್‌ನಲ್ಲಿ ಆಡುವ 10 ತಂಡಗಳು ಆಟಗಾರರನ್ನು ಖರೀದಿಸಲಿವೆ. ಈ ಮೆಗಾ ಬಿಡ್‌ ಪ್ರಕ್ರಿಯೆಯಲ್ಲಿ  ಒಟ್ಟು  577 ಆಟಗಾರರು ಭಾಗವಹಿಸಲಿದ್ದಾರೆ. ಅದರಲ್ಲಿ 204 ಆಟಗಾರರ ಖಾಲಿ ಸ್ಥಾನಗಳಿಗೆ ಆಟಗಾರರ ಖರೀದಿ ನಡೆಯುವ ಸಾಧ್ಯತೆ ಇದೆ.

ಎರಡು ವರ್ಷಗಳ ಹಿಂದೆ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ದೀರ್ಘ ಸಮಯ ಚಿಕಿತ್ಸೆ ಪಡೆದಿದ್ದ ರಿಷಭ್ ಹೋದ ವರ್ಷದ ಐಪಿಎಲ್‌ನಲ್ಲಿ ಅಂಗಳಕ್ಕೆ ಮರಳಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಆಡಿದ್ದರು. ನಂತರ ಟಿ20 ವಿಶ್ವಕಪ್ ಟೂರ್ನಿ ಹಾಗೂ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿಯೂ ಅಮೋಘವಾಗಿ ಆಡಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರ್ಯಾಂಚೈಸಿಯು ಈಚೆಗೆ ರಿಟೇನರ್ಸ್‌ ಪಟ್ಟಿಯಿಂದ ಅವರನ್ನು ಕೈಬಿಟ್ಟಿತ್ತು. ಆದ್ದರಿಂದ ಅವರನ್ನು ಖರೀದಿಸಲು ಎಲ್ಲ ತಂಡಗಳೂ ಪೈಪೋಟಿಗಿಳಿಯುವ ಸಾಧ್ಯತೆ ಇದೆ. ಡೆಲ್ಲಿ ತಂಡವೂ ರೈಟ್‌ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಪ್ರಯೋಗಿಸಿ ಮರಳಿ ಪಂತ್ ಅವರನ್ನು ಖರೀದಿಸಿದರೂ ಅಚ್ಚರಿಯಿಲ್ಲ. 

ADVERTISEMENT

₹ 25 ಕೋಟಿಗಿಂತಲೂ ಹೆಚ್ಚಿನ ಮೌಲ್ಯ ಪಂತ್ ಅವರಿಗೆ ದಕ್ಕುವ ಸಾಧ್ಯತೆ ಇದೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ನಾಯಕತ್ವ, ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ರಿಷಭ್ ಅವರಿಗೆ ಈ ಮೌಲ್ಯ ಲಭಿಸಿದರೂ ಅಚ್ಚರಿಯೇನಿಲ್ಲ.

ಈ ಬಿಡ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ್ಸ್‌ನಲ್ಲಿ ಅತಿ ಹೆಚ್ಚು ಹಣ  ಇದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ₹ 45 ಕೋಟಿ ಪರ್ಸ್ ಹೊಂದಿವೆ. 

ಪಂತ್ ಅವರ ನಂತರ ಅತಿ ಹೆಚ್ಚು ಮೌಲ್ಯದ ನಿರೀಕ್ಷೆಯಲ್ಲಿರುವವರ ಸಾಲಿನಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಹೆಸರು ಮುಂಚೂಣಿಯಲ್ಲಿದೆ. ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅವರು ಕಡಿಮೆ ಅವಧಿಯಲ್ಲಿ 96 ವಿಕೆಟ್‌ಗಳನ್ನು ಗಳಿಸಿದ್ದಾರೆ. 

ಅವರಲ್ಲದೇ ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಇಂಗ್ಲೆಂಡ್‌ನ ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ, ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ಖಲೀಲ್ ಅಹಮದ್, ದೀಪಕ್ ಚಾಹರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆರ್‌. ಅಶ್ವಿನ್, ತನುಷ್ ಕೋಟ್ಯಾನ್, ವಾಷಿಂಗ್ಟನ್ ಸುಂದರ್, ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಸೇರಿ ಹಲವರಿಗೆ ಹೆಚ್ಚಿನ ಬೇಡಿಕೆ ಕುದುರುವ ನಿರೀಕ್ಷೆ ಇದೆ. 

ಮೊಹಮ್ಮದ್ ಶಮಿ
ಜೋಸ್‌ ಬಟ್ಲರ್‌
ರಿಷಭ್‌ ಪಂತ್‌
ಶ್ರೇಯಸ್‌ ಅಯ್ಯರ್‌
ರಿಷಭ್ ಪಂತ್ 
ಕೆ.ಎಲ್. ರಾಹುಲ್ 
ಶ್ರೇಯಸ್ ಅಯ್ಯರ್ 
ಕಗಿಸೊ ರಬಾಡ
ದೇವದತ್ತ ಪಡಿಕ್ಕಲ್ 
ಜೇಮ್ಸ್ ಆ್ಯಂಡರ್ಸನ್ 
ಯಜುವೇಂದ್ರ ಚಾಹಲ್ 
ಜೊಸ್ ಬಟ್ಲರ್ 
ಮೊಹಮ್ಮದ್ ಶಮಿ
ಮೊಹಮ್ಮದ್ ಸಿರಾಜ್ 

ಬಿಡ್ ದಿನಾಂಕ: ನವೆಂಬರ್ 24 ಹಾಗೂ 25

ಸ್ಥಳ: ಜೆದ್ದಾ ಸೌದಿ ಅರೇಬಿಯಾ ನೇರಪ್ರಸಾರ: ಸಮಯ:  (ಅಂಕಿ ಅಂಶ: ಐಪಿಎಲ್ ಅಧಿಕೃತ ವೆಬ್‌ಸೈಟ್ ಹಾಗೂ ಪಿಟಿಐ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.