ADVERTISEMENT

ಚೆಪಾಕ್‌ನಲ್ಲಿ ಚೆನ್ನೈ ಜಯದ ‘ಹ್ಯಾಟ್ರಿಕ್‌’

ಮತ್ತೆ ಮಿಂಚಿದ ಆತಿಥೇಯ ಬೌಲರ್‌ಗಳು: ಪ್ಲೆಸಿ ಅರ್ಧಶತಕ

ಪಿಟಿಐ
Published 7 ಏಪ್ರಿಲ್ 2019, 16:52 IST
Last Updated 7 ಏಪ್ರಿಲ್ 2019, 16:52 IST
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹರಭಜನ್‌ ಸಿಂಗ್‌ (ಎಡ) ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹರಭಜನ್‌ ಸಿಂಗ್‌ (ಎಡ) ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಚೆನ್ನೈ: ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಪಂದ್ಯ ಆಡಿದ ದಕ್ಷಿಣ ಆಫ್ರಿಕಾದ ಫಾಫ್‌ ಡು ಪ್ಲೆಸಿ, ಶನಿವಾರ ಚೆಪಾಕ್‌ ಅಂಗಳದಲ್ಲಿ ಗರ್ಜಿಸಿದರು. ಸ್ಪಿನ್ನರ್‌ ಹರಭಜನ್‌ ಸಿಂಗ್‌ ಕೂಡಾ ಕೈಚಳಕ ತೋರಿದರು.

ಪ್ಲೆಸಿ (54; 38ಎ, 2ಬೌಂ, 4ಸಿ) ಅವರ ಅರ್ಧಶತಕ ಮತ್ತು ಹರಭಜನ್‌ (17ಕ್ಕೆ2) ಬಿಗುವಿನ ದಾಳಿಯ ಸಹಾಯದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 22ರನ್‌ಗಳಿಂದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರು ಗೆದ್ದಿತು. ಈ ಮೂಲಕ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ, ತವರಿನ ಅಂಗಳದಲ್ಲಿ ಜಯದ ‘ಹ್ಯಾಟ್ರಿಕ್‌’ ಸಾಧನೆ ಮಾಡಿತು.

ಮೊದಲು ಬ್ಯಾಟ್‌ ಮಾಡಿದ ಸೂಪರ್‌ ಕಿಂಗ್ಸ್‌, 20 ಓವರ್‌ಗಳಲ್ಲಿ 3 ವಿಕೆಟ್‌ಗೆ 160ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ರವಿಚಂದ್ರನ್‌ ಅಶ್ವಿನ್‌ ಮುಂದಾಳತ್ವದ ಕಿಂಗ್ಸ್‌ ಇಲೆವನ್‌ 5 ವಿಕೆಟ್‌ಗೆ 138ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಕೆ.ಎಲ್‌.ರಾಹುಲ್‌ (55; 47ಎ, 3ಬೌಂ, 1ಸಿ) ಮತ್ತು ಸರ್ಫರಾಜ್‌ ಖಾನ್‌ (67; 59ಎ, 4ಬೌಂ, 2ಸಿ) ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದರು. ಹೀಗಿದ್ದರೂ ತಂಡಕ್ಕೆ ಗೆಲುವು ಒಲಿಯಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 160 (ಶೇನ್ ವಾಟ್ಸನ್‌ 26, ಫಾಫ್‌ ಡು ಪ್ಲೆಸಿ 54, ಸುರೇಶ್‌ ರೈನಾ 17, ಮಹೇಂದ್ರ ಸಿಂಗ್‌ ಧೋನಿ ಔಟಾಗದೆ 37, ಅಂಬಟಿ ರಾಯುಡು ಔಟಾಗದೆ 21; ರವಿಚಂದ್ರನ್‌ ಅಶ್ವಿನ್‌ 23ಕ್ಕೆ3).

ಕಿಂಗ್ಸ್‌ ಇಲೆವನ್‌ ಪಂಜಾಬ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 138 (ಕೆ.ಎಲ್‌.ರಾಹುಲ್‌ 55, ಸರ್ಫರಾಜ್‌ ಖಾನ್‌ 67; ದೀಪಕ್‌ ಚಾಹರ್‌ 40ಕ್ಕೆ1, ಹರಭಜನ್‌ ಸಿಂಗ್‌ 17ಕ್ಕೆ2, ಸ್ಕಾಟ್‌ ಕುಗ್‌ಲೀನ್‌ 37ಕ್ಕೆ2).

ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 22ರನ್‌ ಗೆಲುವು.

‍ಪಂದ್ಯಶ್ರೇಷ್ಠ: ಹರಭಜನ್‌ ಸಿಂಗ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.