ADVERTISEMENT

IPL-2020 | ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ; ಧೋನಿ ಪಡೆಗೆ 44 ರನ್ ಸೋಲು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 18:05 IST
Last Updated 25 ಸೆಪ್ಟೆಂಬರ್ 2020, 18:05 IST
ಪೃಥ್ವಿ ಶಾ ಬ್ಯಾಟಿಂಗ್‌ ವೈಖರಿ (ಟ್ವಿಟರ್ ಚಿತ್ರ)
ಪೃಥ್ವಿ ಶಾ ಬ್ಯಾಟಿಂಗ್‌ ವೈಖರಿ (ಟ್ವಿಟರ್ ಚಿತ್ರ)   

ದುಬೈ: ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 131 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಡೆಲ್ಲಿ ಪಡೆ 44 ರನ್‌ ಅಂತರದ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೇಯಸ್‌ ಅಯ್ಯರ್‌ ಪಡೆ,ಆರಂಭಿಕ ಪೃಥ್ವಿ ಶಾ ಗಳಿಸಿದ ಅರ್ಧಶತಕದ ನೆರವಿನಿಂದ 175 ರನ್‌ ಕಲೆಹಾಕಿದ್ದು. 43 ಎಸೆತಗಳನ್ನು ಎದುರಿಸಿದ್ದ ಶಾ9 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 64 ರನ್‌ ಗಳಿಸಿದ್ದರು. ಅನುಭವಿ ಶಿಖರ್‌ ಧವನ್ (35), ರಿಷಭ್‌ ಪಂತ್ (ಅಜೇಯ 37) ಮತ್ತು ನಾಯಕ ಶ್ರೇಯಸ್‌ ಅಯ್ಯರ್ (26)‌ ಅವರೂ ಉಪಯುಕ್ತ ಆಟವಾಡಿದರು.

ಈ ಮೊತ್ತದೆದುರು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಬ್ಯಾಟ್ಸ್‌ಮನ್‌ಗಳಿಗೆ ಡೆಲ್ಲಿ ಬೌಲರ್‌ಗಳು ತಡೆಯೊಡ್ಡಿದರು. ತಂಡದ ಮೊತ್ತ 44 ರನ್ ಆಗುವಷ್ಟರಲ್ಲಿ ಚೆನ್ನೈನ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಈ ತಂಡ 10 ಓವರ್‌ ಮುಕ್ತಾಯಕ್ಕೆ ಗಳಿಸಿದ್ದು ಕೇವಲ 48 ರನ್‌. ಇದು ಈ ಬಾರಿ ಯಾವುದೇ ತಂಡ ಮೊದಲ ಹತ್ತು ಓವರ್‌ನಲ್ಲಿ ಗಳಿಸಿದ ಅತ್ಯಂತ ಕನಿಷ್ಠ ರನ್‌.

ADVERTISEMENT

ಫಾಫ್‌ ಡು ಪ್ಲೆಸಿ (43), ಕೇದಾರ್ ಜಾಧವ್‌ (26)ಹೊರತುಪಡಿಸಿ ಚೆನ್ನೈ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.

ಡೆಲ್ಲಿ ಪರ ಕಗಿಸೊ ರಬಾಡ ಮೂರು, ಎನ್ರಿಚ್‌ ನೊರ್ಟ್ಜೆ ಎರಡು ವಿಕೆಟ್‌ ಪಡೆದರೆ, ಅಕ್ಷರ್ ಪಟೇಲ್‌ 1 ವಿಕೆಟ್‌ ಉರುಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.