ADVERTISEMENT

ಐಪಿಎಲ್‌ನಲ್ಲಿ ಆಡಲು ದುಬೈ ತಲುಪಿದ ಗಿಡಿ, ಡು ಪ್ಲೆಸಿ, ರಬಾಡ

ಪಿಟಿಐ
Published 1 ಸೆಪ್ಟೆಂಬರ್ 2020, 14:15 IST
Last Updated 1 ಸೆಪ್ಟೆಂಬರ್ 2020, 14:15 IST
ಫಾಫ್‌ ಡು ಪ್ಲೆಸಿ (ಎಡ) ಹಾಗೂ ಕಗೀಸೊ ರಬಾಡ –ಪಿಟಿಐ ಚಿತ್ರ
ಫಾಫ್‌ ಡು ಪ್ಲೆಸಿ (ಎಡ) ಹಾಗೂ ಕಗೀಸೊ ರಬಾಡ –ಪಿಟಿಐ ಚಿತ್ರ   

ದುಬೈ: ದಕ್ಷಿಣ ಆಫ್ರಿಕಾ ಆಟಗಾರರಾದ ಫಾಫ್‌ ಡು ಪ್ಲೆಸಿ, ಲುಂಗಿ ಗಿಡಿ ಹಾಗೂ ಕಗೀಸೊ ರಬಾಡ ಅವರು ಐಪಿಎಲ್‌ ಟೂರ್ನಿಯಲ್ಲಿ ಆಡಲು ಮಂಗಳವಾರ ನಸುಕಿನ ಜಾವ ದುಬೈಗೆ ಬಂದಿಳಿದರು.

ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಡು ಪ್ಲೆಸಿ ಹಾಗೂ ವೇಗಿ ಲುಂಗಿ ಗಿಡಿ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಶಿಬಿರವನ್ನು ಸೇರಿಕೊಂಡಿದ್ದಾರೆ. ಮತ್ತೊಬ್ಬ ವೇಗಿ ರಬಾಡ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಲಿದ್ದಾರೆ.

ಎರಡೂ ಫ್ರ್ಯಾಂಚೈಸ್‌ಗಳು (ಡೆಲ್ಲಿ ಹಾಗೂ ಸಿಎಸ್‌ಕೆ) ದಕ್ಷಿಣ ಆಫ್ರಿಕಾ ಆಟಗಾರರ ಆಗಮನವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿವೆ.

ADVERTISEMENT

ಈ ಮೂರು ಮಂದಿ ಆಟಗಾರರು ಆರು ದಿನಗಳ ಕಾಲ ಪ್ರತ್ಯೇಕವಾಸದಲ್ಲಿ ಇರುವರು. ನಿಯಮದನ್ವಯ ಈ ಅವಧಿಯ 1, 3 ಹಾಗೂ ಆರನೆಯ ದಿನಗಳಂದು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.