ಐಪಿಎಲ್
ಚಿತ್ರ: IPL ವೆಬ್‌ಸೈಟ್
ನವದೆಹಲಿ: ಐಪಿಎಲ್ ತಂಡಗಳಿಗೆ ವಿದೇಶಿ ಆಟಗಾರರ ಅಲಭ್ಯತೆ ಸಮಸ್ಯೆಯನ್ನು ನಿವಾರಿಸಲು ಟೂರ್ನಿಯ ಉಳಿದ ಭಾಗದಲ್ಲಿ ಬದಲೀ ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳುವ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ.
ಇದೇ 17ರಿಂದ ಐಪಿಎಲ್ ಮರು ಆರಂಭವಾಗಲಿದೆ. ಆದರೆ ಬ್ಲ್ಯಾಕ್‌ಔಟ್ ಕಾರಣದಿಂದ ನೀಡಲಾಗಿದ್ದ ಒಂದು ವಾರದ ಬಿಡುವಿನ ಸಂದರ್ಭದಲ್ಲಿ ತಮ್ಮ ದೇಶಗಳಿಗೆ ತೆರಳಿದ್ದ ಕೆಲವು ಆಟಗಾರರು ಮತ್ತೆ ಭಾರತಕ್ಕೆ ಮರಳುತ್ತಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವ ಇಂಗ್ಲೆಂಡ್ ಆಟಗಾರ ಜೆಮಿ ಓವರ್ಟನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸುವ ಆಸ್ಟ್ರೇಲಿಯಾ ಬ್ಯಾಟರ್ ಜೆಕ್ ಫ್ರೆಸರ್ ಮೆಕ್‌ಗುರ್ಕ್ ಅವರು ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬದಲೀ ಆಟಗಾರರ ಸೇರ್ಪಡೆ ನಿಯಮವನ್ನು ಸಡಿಲಗೊಳಿಸಲಾಗಿದೆ. ಈ ಹಂತದಲ್ಲಿಯೂ ಬದಲೀ ಆಟಗಾರರನ್ನು ಪಡೆಯಲು ಫ್ರ್ಯಾಂಚೈಸಿಗಳಿಗೆ ಅನುವು ಮಾಡಿಕೊಡಲಾಗಿದೆ ಎಂದು ಲೀಗ್ ಮೂಲಗಳು ತಿಳಿಸಿವೆ.
‘ಈ ಆಟಗಾರರ ಬದಲೀ ನಿಯಮವು ತಾತ್ಕಾಲಿಕವಾಗಿದೆ. ಈಗ ಸ್ಥಾನ ಪಡೆದ ಆಟಗಾರರು ಮುಂದಿನ ಆವೃತ್ತಿಯ ಟೂರ್ನಿಗೆ ಮುಂದುವರಿಯುವುದಿಲ್ಲ’ ಎಂದೂ ನಿಯಮವನ್ನು ಸ್ಪಷ್ಟಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.