ADVERTISEMENT

IPL 2026: ಐಪಿಎಲ್‌ ಹರಾಜಿನಿಂದಲೇ ಹೊರಗುಳಿದ ಆರ್‌ಸಿಬಿ ಮಾಜಿ ಆಟಗಾರ

ಪಿಟಿಐ
Published 2 ಡಿಸೆಂಬರ್ 2025, 10:29 IST
Last Updated 2 ಡಿಸೆಂಬರ್ 2025, 10:29 IST
   

ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು 2026ರಲ್ಲಿ ಜರುಗಲಿರುವ ಐಪಿಎಲ್‌ 19ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ.

ಡಿ.16ರಂದು ಅಬುಧಾಬಿಯಲ್ಲಿ ಮಿನಿ ಹರಾಜು ಜರುಗಲಿದ್ದು, 37 ವರ್ಷದ ಮ್ಯಾಕ್ಸ್‌ವೆಲ್‌ ಅವರು ಮುಂದಿನ ಬಾರಿಯ ಐಪಿಎಲ್‌ ಆಡುವುದು ಅನುಮಾನವಾಗಿದೆ.

'ನಾನು ಐಪಿಎಲ್‌ನ ಹಲವು ಮರೆಯಲಾಗದ ಘಟನೆಗಳ ಭಾಗವಾಗಿದ್ದೇನೆ. ಈ ಟೂರ್ನಿಯು ಒಬ್ಬ ಆಟಗಾರ ಮತ್ತು ವ್ಯಕ್ತಿಯಾಗಿ ನನ್ನನ್ನು ರೂಪಿಸಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಆಟಗಾರರು ಹಾಗೂ ಒಳ್ಳೆಯ ತಂಡಗಳ ಭಾಗವಾಗಿದ್ದೇನೆ. ಆದರೆ, ಈ ಬಾರಿ ಹರಾಜು ಪ್ರಕಿಯೆಯಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ. ಉತ್ತಮ ನೆನಪುಗಳನ್ನು ನೀಡಿದ ಟೂರ್ನಿಗೆ ಧನ್ಯವಾದಗಳು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

2012 ರಿಂದ ಐಪಿಎಲ್‌ ಕಣದಲ್ಲಿರುವ ಮ್ಯಾಕ್ಸ್‌ವೆಲ್‌ ಅವರು ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್ಸ್‌, ಮುಂಬೈ ಇಂಡಿಯನ್ಸ್, ಪಂಜಾಬ್‌ ಕಿಂಗ್ಸ್‌ ತಂಡಗಳ ಪರ ಕಣಕ್ಕಿಳಿದಿದ್ದಾರೆ.

ಐಪಿಎಲ್‌ನಲ್ಲಿ 141 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್‌ವೆಲ್‌, 155ರ ಸ್ಟ್ರೈಕ್‌ ರೇಟ್‌ನಲ್ಲಿ 2819 ರನ್‌ ಗಳಿಸಿದ್ದಾರೆ. ಆದರೆ ಅವರ ಸರಾಸರಿ ಕೇವಲ 24ರಷ್ಟಿದೆ. ಅಷ್ಟೇ ಪಂದ್ಯಗಳಲ್ಲಿ 41 ವಿಕೆಟ್‌ ಕೂಡ ಪಡೆದಿದ್ದಾರೆ.

ಆದರೆ ಐಪಿಎಲ್‌ ಹರಾಜಿನಿಂದ ಹೊರಗುಳಿದಿದ್ದೇಕೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.