ADVERTISEMENT

ಐಪಿಎಲ್: ಚೀನಾ ಕಂಪನಿ ಪ್ರಾಯೋಜಕತ್ವ ಅಬಾಧಿತ

ಪಿಟಿಐ
Published 2 ಆಗಸ್ಟ್ 2020, 20:40 IST
Last Updated 2 ಆಗಸ್ಟ್ 2020, 20:40 IST
ಐಪಿಎಲ್‌– ಪ್ರಾತಿನಿಧಿಕ ಚಿತ್ರ
ಐಪಿಎಲ್‌– ಪ್ರಾತಿನಿಧಿಕ ಚಿತ್ರ   

ನವದೆಹಲಿ: ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ ನಡೆಯಲಿರುವ ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೀನಾದ ಮೊಬೈಲ್‌ ಕಂಪನಿಯ ಪ್ರಾಯೋಜಕತ್ವವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ.

ಭಾನುವಾರ ಸಂಜೆ ನಡೆದ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

‘ಈ ಬಾರಿಯೂ ಎಲ್ಲ ಪ್ರಾಯೋಜಕರೂ ನಮ್ಮೊಂದಿಗೆ ಇದ್ದಾರೆ. ಈ ಮಾತಿನ ಒಳಾರ್ಥವನ್ನು ನೀವೇ ಊಹಿಸಿಕೊಳ್ಳಿ’ ಎಂದು ಸದಸ್ಯರೊಬ್ಬರು ತಿಳಿಸಿದರು.

ADVERTISEMENT

ಐಪಿಎಲ್‌ಗೆ ಪ್ರಾಯೋಜಕತ್ವ ನೀಡುತ್ತಿರುವ ವಿವೊ ಮೊಬೈಲ್ ಕಂಪನಿ ಚೀನಾದ್ದಾಗಿದೆ. ಜೂನ್‌ನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಗಡಿಯಲ್ಲಿ ಸಂಘರ್ಷ ನಡೆದಿತ್ತು. ಆಗಿನಿಂದ ಚೀನಾ ಉತ್ಪನ್ನಗಳ ಬಹಿಷ್ಕಾರದ ಅಭಿಯಾನ ಆರಂಭವಾಗಿದೆ. ಅದರಿಂದಾಗಿ ಬಿಸಿಸಿಐ ತೆಗೆದುಕೊಳ್ಳುವ ನಿಲುವು ಏನಿರಬಹುದು ಎಂಬ ಕುತೂಹಲ ಹೆಚ್ಚಾಗಿತ್ತು. ಟೂರ್ನಿಯನ್ನು ಸೆಪ್ಟೆಂಬರ್ 19 ರಿಂದ ನವೆಂಬರ್‌ 10ರವರೆಗೆ ಆಯೋಜಿಸಲೂ ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.