ADVERTISEMENT

ಅಂಪೈರ್ ತೀರ್ಪಿನಿಂದ ಸಿಟ್ಟಿಗೆದ್ದು ಬ್ಯಾಟ್, ಹೆಲ್ಮೆಟ್ ಬಿಸಾಡಿದ ವೇಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2022, 11:15 IST
Last Updated 20 ಮೇ 2022, 11:15 IST
ಮ್ಯಾಥ್ಯೂ ವೇಡ್
ಮ್ಯಾಥ್ಯೂ ವೇಡ್   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಗುಜರಾತ್ ಟೈಟನ್ಸ್ ಬ್ಯಾಟರ್ ಮ್ಯಾಥ್ಯೂ ವೇಡ್ ಅವರಿಗೆ ಛೀಮಾರಿ ಹಾಕಲಾಗಿದೆ.

ಅಂಪೈರ್ ಔಟ್ ತೀರ್ಪು ನೀಡಿದ ಸಿಟ್ಟಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಬ್ಯಾಟ್, ಹೆಲ್ಮೆಟ್ ಬಿಸಾಡುವ ಮೂಲಕ ವೇಡ್ ಆಕ್ರೋಶ ವ್ಯಕ್ತಪಡಿಸಿದ್ದರು.

ಗುಜರಾತ್ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಘಟನೆ ನಡೆದಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ ಚೆಂಡನ್ನು ವೇಡ್ ಸ್ವೀಪ್ ಮಾಡಲು ಪ್ರಯತ್ನಿಸಿದ್ದರು.

ಈ ವೇಳೆ ಚೆಂಡು ಪ್ಯಾಡ್‌ಗೆ ಅಪ್ಪಳಿಸಿತ್ತು. ಬೌಲರ್ ಮನವಿಯನ್ನು ಪುರಸ್ಕರಿಸಿದ ಫೀಲ್ಡ್ ಅಂಪೈರ್ ಔಟ್ ತೀರ್ಪು ನೀಡಿದರು.

ಚೆಂಡು ಬ್ಯಾಟ್‌ಗೆ ಸವರಿದೆ ಎಂದು ಅಂದುಕೊಂಡಿದ್ದ ವೇಡ್‌ ತಕ್ಷಣ ಡಿಆರ್‌ಎಸ್ ಮನವಿಗೆ ಮೊರೆ ಹೋದರು.

ಆದರೆ ಅಲ್ಟ್ರಾಎಡ್ಜ್‌ನಲ್ಲೂ ಚೆಂಡು ಬ್ಯಾಟ್‌ಗೆ ತಗುಲಿರುವುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಇದರಿಂದ ಆಕ್ರೋಶಗೊಂಡ ವೇಡ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಅಲ್ಲದೆ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ಹೆಲ್ಮೆಟ್ ಬಿಸಾಡಿ, ಬ್ಯಾಟ್ ಅನ್ನು ಬಲವಾಗಿ ನೆಲಕ್ಕೆ ಹೊಡೆದರು.

ತೀವ್ರ ನಿರಾಶರಾಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದ ವೇಡ್ ಅವರ ಹೆಗಲ ಮೇಲೆ ಕೈ ಹಾಕಿ ವಿರಾಟ್ ಕೊಹ್ಲಿ ಸಂತೈಸುತ್ತಿರುವ ದೃಶ್ಯ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.