ADVERTISEMENT

ಟಿ20 ವಿಶ್ವಕಪ್: ಐರ್ಲೆಂಡ್‌ಗೆ ಅರ್ಹತೆ

ಪಿಟಿಐ
Published 27 ಜುಲೈ 2023, 14:37 IST
Last Updated 27 ಜುಲೈ 2023, 14:37 IST
ಪಾಲ್ ಸ್ಟ್ರರ್ಲಿಂಗ್
ಪಾಲ್ ಸ್ಟ್ರರ್ಲಿಂಗ್   

ಎಡಿನ್‌ಬರ್ಗ್ : ಐರ್ಲೆಂಡ್  ಕ್ರಿಕೆಟ್‌ ತಂಡವು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದೆ. 

2024ರಲ್ಲಿ ಟಿ20 ವಿಶ್ವಕಪ್ ಟೂರ್ನಿಯು ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಸಹಭಾಗಿತ್ವದಲ್ಲಿ ನಡೆಯಲಿದೆ.

ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಐರ್ಲೆಂಡ್ ಮತ್ತು ಜರ್ಮನಿ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಇದರೊಂದಿಗೆ ಐರ್ಲೆಂಡ್‌ ಹಾದಿಯೂ ಸುಗಮವಾಯಿತು.  ಅಂಕಪಟ್ಟಿಯಲ್ಲಿ  ಎರಡನೇ ಸ್ಥಾನ ಪಡೆದಿರುವ ಐರ್ಲೆಂಡ್ ಅರ್ಹತಾ ಸುತ್ತಿನ ಇನ್ನೊಂದು ಪಂದ್ಯದಲ್ಲಿ  ಈಗಾಗಲೇ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿರುವ ಸ್ಕಾಟ್ಲೆಂಡ್ ಎದುರು ಸೆಣಸಲಿದೆ. ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ಐರ್ಲೆಂಡ್ ತಂಡವು ನಾಲ್ಕರಲ್ಲಿ ಜಯಿಸಿದೆ. ಸ್ಕಾಟ್ಲೆಂಡ್ ವಿರುದ್ಧ  ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.

ADVERTISEMENT

‘ಟೂರ್ನಿಗೆ ಅರ್ಹತೆ ಗಿಟ್ಟಿಸುವುದರ ಮೂಲಕ ನಮ್ಮ ಮೊದಲ ಗುರಿ ಈಡೇರಿದೆ. ಇಲ್ಲಿಗೆ ಬರುವಾಗ ಅರ್ಹತೆ ಗಿಟ್ಟಿಸುವುದೊಂದೇ ನಮ್ಮ ಗುರಿಯಾಗಿತ್ತು. ನಾವು ಬಯಸಿದ ರೀತಿಯಲ್ಲಿ ಆಟದ ಶೈಲಿಯನ್ನು ಜಾರಿಗೊಳಿಸಿದ್ದೇವೆ. ಉತ್ತಮವಾಗಿ ಆಡಿರುವ ತೃಪ್ತಿ ಇದೆ‘ ಎಂದು ಐರ್ಲೆಂಡ್ ತಂಡದ ನಾಯಕ ಪಾಲ್ ಸ್ಟರ್ಲಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.