ADVERTISEMENT

ಟಿ–20 ವಿಶ್ವಕಪ್: ಇಟಲಿಗೆ ಚೊಚ್ಚಲ ಜಯ

ಪಿಟಿಐ
Published 12 ಫೆಬ್ರುವರಿ 2026, 16:03 IST
Last Updated 12 ಫೆಬ್ರುವರಿ 2026, 16:03 IST
<div class="paragraphs"><p>ಇಟಲಿ ಕ್ರಿಕೆಟ್ ತಂಡದ ಆಟಗಾರ ಕ್ರಿಶನ್ ಕಲುಗಮಗೆ&nbsp;</p></div>

ಇಟಲಿ ಕ್ರಿಕೆಟ್ ತಂಡದ ಆಟಗಾರ ಕ್ರಿಶನ್ ಕಲುಗಮಗೆ 

   

ಮುಂಬೈ: ಲೆಗ್‌ಬ್ರೇಕ್ ಬೌಲರ್ ಕ್ರಿಶನ್ ಕಲುಗಮಗೆ ಪರಿಣಾಮಕಾರಿ ದಾಳಿ ಹಾಗೂ ಮೊಸ್ಕಾ ಸಹೋದರರ ಅಮೋಘ ಬ್ಯಾಟಿಂಗ್ ನಿಂದಾಗಿ ಇಟಲಿ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಜಯ ದಾಖಲಿಸಿತು. 

ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಇಟಲಿ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

ADVERTISEMENT

ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದಿರುವ ಇಟಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಪಿನ್ನರ್ ಕ್ರಿಶನ್ (18ಕ್ಕೆ3) ಅವರ ದಾಳಿಯ ಮುಂದೆ ನೇಪಾಳ ತಂಡವು 19.3 ಓವರ್‌ಗಳಲ್ಲಿ 123 ರನ್‌ಗಳ ಸಣ್ಣ ಮೊತ್ತ ಗಳಿಸಿತು. ಕ್ರಿಶನ್ ಅವರು ಶ್ರೀಲಂಕಾದವರು. ಇಟಲಿಯಲ್ಲಿ ನೆಲೆಸಿದ್ದಾರೆ. 

ಈಚೆಗೆ ಇಂಗ್ಲೆಂಡ್ ವಿರುದ್ಧ ಅಮೋಘ ಆಟವಾಡಿದ್ದ ನೇಪಾಳ ತಂಡದ ಬ್ಯಾಟರ್‌ಗಳು ಇಟಲಿಯ ಮುಂದೆ ವಿಫಲರಾದರು. ಆರಿಫ್ ಶೇಖ್ (27 ರನ್) ಅವರದ್ದೇ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿತು. 

ಈ ಗುರಿಯನ್ನು ಬೆನ್ನಟ್ಟಿದ ಇಟಲಿ ತಂಡವು ಕೇವಲ 12.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 124 ರನ್ ಗಳಿಸಿತು. ಯಾವುದೇ ಧಾವಂತಕ್ಕೊಳಗಾದ ಆರಂಭಿಕ ಜೋಡಿ ಮತ್ತು ಸಹೋದರರಾದ ಜಸ್ಟಿನ್ ಮೊಸ್ಕಾ (ಅಜೇಯ 60; 44ಎ, 4X5, 6X3) ಮತ್ತು ಅಂಥೋಣಿ ಮೊಸ್ಕಾ (ಅಜೇಯ 62; 32ಎ, 4X3, 6X6) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. 34 ವರ್ಷದ ಅಂಥೋಣಿ ಮತ್ತು 31 ವರ್ಷದ ಜಸ್ಟಿನ್ ಅವರು ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 76 ಎಸೆತಗಳಲ್ಲಿ ಗೆಲುವಿನ ಮೊತ್ತ ಸೇರಿಸಿದರು. 

ಸಂಕ್ಷಿಪ್ತ ಸ್ಕೋರು:

ನೇಪಾಳ: 19.3 ಓವರ್‌ಗಳಲ್ಲಿ 123 (ಆಸಿಫ್ ಶೇಖ್ 20, ರೋಹಿತ್ ಪಾಡೆಲ್ 23, ಆರಿಫ್ ಶೇಖ್ 27, ಕೆ.ಸಿ. ಕರಣ್ ಔಟಾಗದೇ 18, ಬೆನ್ ಮ್ಯಾನೇಂಟಿ 9ಕ್ಕೆ2, ಕ್ರಿಷನ್ ಕಲುಗಮಗೆ 18ಕ್ಕೆ3)

ಇಟಲಿ: 12.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 124 (ಜಸ್ಟಿನ್ ಮೊಸ್ಕಾ ಔಟಾಗದೇ 60, ಅಂಥೋಣಿ ಮೊಸ್ಕಾ ಅಜೇಯ 62) ಫಲಿತಾಂಶ:ಇಟಲಿ ತಂಡಕ್ಕೆ 10 ವಿಕೆಟ್ ಜಯ. ಪಂದ್ಯದ ಆಟಗಾರ: ಕ್ರಿಷನ್ ಕಲುಗಮಗೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.