ADVERTISEMENT

Ranji Trophy 2025: ರಣಜಿ ಪಂದ್ಯದಲ್ಲಿ ಆಡಲಿರುವ ರವೀಂದ್ರ ಜಡೇಜ

ಪಿಟಿಐ
Published 19 ಜನವರಿ 2025, 13:57 IST
Last Updated 19 ಜನವರಿ 2025, 13:57 IST
ರವೀಂದ್ರ ಜಡೇಜ
ರವೀಂದ್ರ ಜಡೇಜ   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಇದೇ 23ರಿಂದ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೌರಾಷ್ಟ್ರ ತಂಡದಲ್ಲಿ ಆಡುವರು. 

ದೆಹಲಿ ತಂಡದ ಎದುರು ಸೌರಾಷ್ಟ್ರ ಕಣಕ್ಕಿಳಿಯಲಿದೆ. 2023ರ ಜನವರಿಯಲ್ಲಿ ಜಡೇಜ ಅವರು ಕೊನೆಯ ಸಲ ರಣಜಿ ಪಂದ್ಯದಲ್ಲಿ ಆಡಿದ್ದರು. 

ಈಚೆಗೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡವು ಸರಣಿ ಸೋತ ನಂತರ ರಾಷ್ಟ್ರೀಯ ತಂಡದ ಆಟಗಾರರು ಬಿಡುವು ಇದ್ದಾಗ ದೇಶಿ ಕ್ರಿಕೆಟ್‌ನಲ್ಲಿ ಆಡುವುದು ಕಡ್ಡಾಯ ಎಂದು ನಿಯಮ ರೂಪಿಸಿದೆ. 

ADVERTISEMENT

‘ಇವತ್ತು (ಭಾನುವಾರ) ಜಡೇಜ ಅವರು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು. ಮುಂದಿನ ಪಂದ್ಯದಲ್ಲಿ ಅವರು ಆಡುವರು’ ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಯದೇವ್ ಶಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.