ಬಸ್‌ಪ್ರೀತ್ ಬೂಮ್ರಾ
ಪಿಟಿಐ ಚಿತ್ರ
ದುಬೈ: ಭಾರತ ಕ್ರಿಕೆಟ್ ತಂಡದ ಖ್ಯಾತ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರನ್ನು 2024ರ ಡಿಸೆಂಬರ್ ತಿಂಗಳ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗೆ ನಾಮ ನಿರ್ದೆಶನ ಮಾಡಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಬೂಮ್ರಾ, ಡಿಸೆಂಬರ್ ತಿಂಗಳಲ್ಲಿ ಮೂರು ಟೆಸ್ಟ್ ಪಂದ್ಯಗಳಿಂದ 14.22ರ ಸರಾಸರಿಯಲ್ಲಿ 22 ವಿಕೆಟ್ ಕಬಳಿಸಿದ್ದರು. ಒಟ್ಟಾರೆ ಐದು ಟೆಸ್ಟ್‌ಗಳಿಂದ ಅವರು 32 ವಿಕೆಟ್ ಕಬಳಿಸಿದ್ದಾರೆ.
ದುರದೃಷ್ಟವಶಾತ್, ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್ನು ಸೆಳೆತದಿಂದಾಗಿ ಬುಮ್ರಾ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಭಾರತ ಈ ಪಂದ್ಯದಲ್ಲಿ ಸೋಲುಂಡಿತ್ತು.
ಪ್ರಶಸ್ತಿಗಾಗಿ ಬೂಮ್ರಾ ಅವರೊಂದಿಗೆ ಸ್ಪರ್ಧೆ ಒಡ್ಡಿರುವ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಮೂರು ಟೆಸ್ಟ್‌ಗಳಿಂದ 17.64 ಸರಾಸರಿಯಲ್ಲಿ 17 ವಿಕೆಟ್ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದ ಸೀಮರ್ ಡೇನ್ ಪ್ಯಾಟರ್ಸನ್ ಸಹ ರೇಸ್‌ನಲ್ಲಿದ್ದಾರೆ.
ಅಡಿಲೇಡ್‌ನಲ್ಲಿ 5/57ರ ಅಮೋಘ ಪ್ರದರ್ಶನ ನೀಡಿದ್ದ ಪ್ಯಾಟ್, ಭಾರತ ವಿರುದ್ಧ 10 ವಿಕೆಟ್‌ಗಳಿಂದ ಜಯ ಗಳಿಸಲು ನೆರವಾಗಿದ್ದರು.
ಮೆಲ್ಬರ್ನ್ ಟೆಸ್ಟ್‌ನಲ್ಲೂ ಕ್ರಮವಾಗಿ 49 ಮತ್ತು 41 ರನ್ ಸಿಡಿಸಿ ಗಮನ ಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.