ADVERTISEMENT

ನೀಶಮ್, ಲಾಕಿಗೆ ನಾಯಕನ ಮೆಚ್ಚುಗೆ

ಪಿಟಿಐ
Published 9 ಜೂನ್ 2019, 20:19 IST
Last Updated 9 ಜೂನ್ 2019, 20:19 IST
ಜೇಮ್ಸ್ ನೀಶಮ್ –ಎಎಫ್‌ಪಿ ಚಿತ್ರ
ಜೇಮ್ಸ್ ನೀಶಮ್ –ಎಎಫ್‌ಪಿ ಚಿತ್ರ   

ಟಾಂಟನ್: ವಿಶ್ವಕಪ್ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ವೇಗಿಗಳಾದ ಜೇಮ್ಸ್ ನೀಶಮ್ ಮತ್ತು ಲಾಕಿ ಫರ್ಗ್ಯುಸನ್ ಅವರ ಪಾತ್ರ ಮಹತ್ವದ್ದು ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಭಿಪ್ರಾಯಪಟ್ಟರು.

ಅಫ್ಗಾನಿಸ್ತಾನ ವಿರುದ್ಧ ಶನಿವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ಏಳು ವಿಕೆಟ್‌ಗಳಿಂದ ಗೆದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಗಾನಿಸ್ತಾನ 41.1 ಓವರ್‌ಗಳಲ್ಲಿ 172 ರನ್‌ಗಳಿಗೆ ಪತನ ಕಂಡಿತ್ತು. ಫರ್ಗ್ಯುಸನ್ 37ಕ್ಕೆ4 ಮತ್ತು ನಿಶಮ್ 31ಕ್ಕೆ5 ವಿಕೆಟ್ ಉರುಳಿಸಿದ್ದರು.

ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 32.1 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 173 ರನ್ ಗಳಿಸಿ ಗೆಲುವು ಸಾಧಿಸಿತ್ತು. ಈ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿತ್ತು. ವಿಲಿಯಮ್ಸನ್ 99 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳೊಂದಿಗೆ 79 ರನ್ ಗಳಿಸಿದ್ದರು.

ADVERTISEMENT

‘ಇಲ್ಲಿನ ಪಿಚ್ ಬೌಲರ್‌ಗಳಿಗೆ ನೆರವು ನೀಡುತ್ತಿತ್ತು. ಇದರ ಲಾಭ ಪಡೆದುಕೊಂಡ ನೀಶಮ್ ಉತ್ತಮ ದಾಳಿ ನಡೆಸಿದರು. ಮತ್ತೊಂದು ತುದಿಯಲ್ಲಿ ಫರ್ಗ್ಯುಸನ್ ಕೂಡ ಅಮೋಘ ಬೌಲಿಂಗ್ ಮಾಡಿದರು.

ಅಫ್ಗಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು. ಅವರ ಜೊತೆಯಾಟವನ್ನು ಮುರಿದು ನೀಶಮ್ ಭಾರಿ ತಿರುವು ತಂದುಕೊಟ್ಟರು. ಇದು, ಫರ್ಗ್ಯುಸನ್‌ಗೂ ಹುಮ್ಮಸ್ಸು ತುಂಬಿತು’ ಎಂದು ಕೇನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.