ADVERTISEMENT

ಕೋವಿಡ್‌–19 ಲಸಿಕೆ ಪಡೆದ ಕಪಿಲ್ ದೇವ್‌

ಪಿಟಿಐ
Published 3 ಮಾರ್ಚ್ 2021, 13:03 IST
Last Updated 3 ಮಾರ್ಚ್ 2021, 13:03 IST
ಕಪಿಲ್ ದೇವ್‌–ಪಿಟಿಐ ಚಿತ್ರ
ಕಪಿಲ್ ದೇವ್‌–ಪಿಟಿಐ ಚಿತ್ರ   

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ಕೋವಿಡ್–19 ಲಸಿಕೆಯ ಮೊದಲ ಡೋಸ್‌ಅನ್ನು ಬುಧವಾರ ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಪಡೆದರು.

ವಿಶ್ವಕಪ್ ವಿಜೇತ ತಂಡದ ನಾಯಕ, 62 ವರ್ಷದ ಕಪಿಲ್‌ ಅವರು ರವಿಶಾಸ್ತ್ರಿ ಬಳಿಕ ಲಸಿಕೆ ಪಡೆದ ಭಾರತದ ಎರಡನೇ ಮಾಜಿ ಕ್ರಿಕೆಟಿಗ ಆಗಿದ್ದಾರೆ. ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಮಂಗಳವಾರ ಅಹಮದಾಬಾದ್‌ನಲ್ಲಿ ಲಸಿಕೆ ಹಾಕಿಸಿಕೊಂಡಿದ್ದರು.

ಭಾರತದಲ್ಲಿ ಕೋವಿಡ್‌ ಲಸಿಕಾ ಅಭಿಯಾನವು ಸೋಮವಾರ ಎರಡನೇ ಹಂತ ಪ್ರವೇಶಿಸಿದೆ. ಈ ಹಂತದಲ್ಲಿ 60 ವರ್ಷಕ್ಕಿಂತ ಮೇಲಿನ ಪ್ರತಿಯೊಬ್ಬರಿಗೂ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷಕ್ಕಿಂತ ಮೇಲಿನವರಿಗೆ ಲಸಿಕೆಯನ್ನು ವಿಸ್ತರಿಸಲಾಗಿದೆ.

ADVERTISEMENT

ಭಾರತದ ಶ್ರೇಷ್ಠ ವೇಗಿಯಾಗಿರುವ ಕಪಿಲ್‌ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹೃದಯಾಘಾತದಿಂದ ಬಳಲಿದ್ದರು. ಆ್ಯಂಜಿಯೊಪ್ಲಾಸ್ಟಿಗೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.