ADVERTISEMENT

ಮಹಿಳಾ ಕ್ರಿಕೆಟ್‌: ಕರ್ನಾಟಕ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 14:47 IST
Last Updated 19 ಮಾರ್ಚ್ 2021, 14:47 IST
ಕ್ರಿಕೆಟ್
ಕ್ರಿಕೆಟ್   

ಬೆಂಗಳೂರು: ಆಲ್‌ರೌಂಡ್ ಆಟ ಪ್ರದರ್ಶಿಸಿದ ಕರ್ನಾಟಕ ತಂಡ ಬಿಸಿಸಿಐ ಆಯೋಜಿಸಿರುವ ಮಹಿಳೆಯರ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಗೆಲುವು ಸಾಧಿಸಿತು. ಚೆನ್ನೈನ ಟಿ.ಐ.ಮುರುಗಪ್ಪ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡವನ್ನು ಕರ್ನಾಟಕದ ಮಹಿಳೆಯರು ನಾಲ್ಕು ವಿಕೆಟ್‌ಗಳಿಂದ ಮಣಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಹಿಮಾಚಲಪ್ರದೇಶವನ್ನು 163 ರನ್‌ಗಳಿಗೆ ನಿಯಂತ್ರಿಸಿದ ಕರ್ನಾಟಕ 40.2 ಓವರ್‌ಗಳಲ್ಲಿ ಗುರಿ ಮುಟ್ಟಿತು.

ಸಂಕ್ಷಿಪ್ತ ಸ್ಕೋರು: ಹಿಮಾಚಲಪ್ರದೇಶ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 (ನೀನಾ ಚೌಧರಿ 20, ಚಿತ್ರಾ ಸಿಂಗ್ 53, ಮೋನಿಕಾ ದೇವಿ 26, ತನುಜಾ 30; ರಾಮೇಶ್ವರಿ ಗಾಯಕವಾಡ್‌ 25ಕ್ಕೆ2, ಚಂದು ವಿ 31ಕ್ಕೆ2); ಕರ್ನಾಟಕ: 40.2 ಓವರ್‌ಗಳಲ್ಲಿ 6ಕ್ಕೆ 165 (ಶುಭಾ ಎಸ್‌ ಔಟಾಗದೆ 76, ವನಿತಾ ವಿ.ಆರ್‌ 41, ದಿವ್ಯಾ ಜಿ 23; ರೇಣುಕಾ ಸಿಂಗ್‌ 28ಕ್ಕೆ2, ತನುಜಾ 29ಕ್ಕೆ2). ಫಲಿತಾಂಶ: ಕರ್ನಾಟಕಕ್ಕೆ 4 ವಿಕೆಟ್‌ಗಳ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.