ಕ್ಯಾಂಟರ್‌ಬರಿ, ಇಂಗ್ಲೆಂಡ್: ಬೆಂಗಳೂರಿನ ಕರುಣ್ ನಾಯರ್ ಇಂಗ್ಲೆಂಡ್ ನೆಲದಲ್ಲಿ ಅಮೋಘ ಶತಕ ದಾಖಲಿಸಿದರು.
ಶುಕ್ರವಾರ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆರಂಭವಾದ ‘ಟೆಸ್ಟ್’ ಪಂದ್ಯದಲ್ಲಿ ಭಾರತ ಎ ತಂಡವು 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 409 ರನ್ ಗಳಿಸಿತು. ಇದಕ್ಕೆ ಕರುಣ್ (ಬ್ಯಾಟಿಂಗ್ 186; 246ಎ, 4X24, 6X1) ಅವರ ಶತಕ ಕಾರಣವಾಯಿತು. ಎಂಟು ರನ್‌ಗಳ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡ ಸರ್ಫರಾಜ್ ಖಾನ್ (92; 119ಎ) ಮತ್ತು ಕರುಣ್ 3ನೇ ವಿಕೆಟ್ ಜೊತೆಯಾಟದಲ್ಲಿ 181 ರನ್ ಸೇರಿಸಿದರು.
ಖಾನ್ ಔಟಾದ ನಂತರ ಕ್ರೀಸ್‌ಗೆ ಬಂದ ಜುರೇಲ್ (ಬ್ಯಾಟಿಂಗ್ 82, 104ಎ, 4X9, 6X1) ಕೂಡ ಬೀಸಾಟವಾಡಿದರು. 3ನೇ ವಿಕೆಟ್ ಜೊತೆಯಾಟದಲ್ಲಿ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 177 ರನ್ ಪೇರಿಸಿದರು.
ಮೂರನೇ ಕ್ರಮಾಂಕದಲ್ಲಿ ಆಡಿದ ಕರುಣ್, ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂದಿನ ತಿಂಗಳು ಇಂಗ್ಲೆಂಡ್ ಎದುರಿಗೆ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿಯೂ ಕರುಣ್ ಸ್ಥಾನ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ಭಾರತ ಎ: 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 409 (ಯಶಸ್ವಿ ಜೈಸ್ವಾಲ್ 24, ಕರುಣ್ ನಾಯರ್ ಬ್ಯಾಟಿಂಗ್ 186, ಸರ್ಫರಾಜ್ ಖಾನ್ 92, ಧ್ರುವ್ ಜುರೇಲ್ ಬ್ಯಾಟಿಂಗ್ 82, ಜೋಶ್ ಹಲ್ 38ಕ್ಕೆ2, ಎಡ್ವರ್ಡ್ ಜ್ಯಾಕ್ 34ಕ್ಕೆ1) ವಿರುದ್ಧ ಇಂಗ್ಲೆಂಡ್ ಲಯನ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.