ADVERTISEMENT

IPL 2025: ಆರ್‌ಸಿಬಿಗೆ ಜಿಂಬಾಬ್ವೆಯ ವೇಗಿ ಮಝರಾಬಾನಿ

ಪಿಟಿಐ
Published 19 ಮೇ 2025, 20:52 IST
Last Updated 19 ಮೇ 2025, 20:52 IST
   

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಜಿಂಬಾಬ್ವೆಯ ವೇಗದ ಬೌಲರ್‌ ಬ್ಲೆಸಿಂಗ್ ಮುಝರಾಬಾನಿ ಅವರನ್ನು ಸೇರ್ಪಡೆ ಮಾಡಿಕೊಂಡಿದೆ. ಅವರು ಲುಂಗಿಸಾನಿ ಗಿಡಿ ಸ್ಥಾನದಲ್ಲಿ ಆಡುವರು ಫ್ರಾಂಚೈಸಿಯು ಸೋಮವಾರ ತಿಳಿಸಿದೆ.

ಗಿಡಿ ಅವರು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಡುವ ದಕ್ಷಿಣ ಆಫ್ರಿಕಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೇ 26ರಿಂದ ಈ ಬದಲಾವಣೆ ಅನ್ವಯವಾಗಲಿದೆ. ಮುಝರಾಬಾನಿ ಅವರು 70 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ 78 ವಿಕೆಟ್‌ ಪಡದಿದ್ದಾರೆ. 12 ಟೆಸ್ಟ್ ಮತ್ತು 55 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.

ಅವರು ₹75 ಲಕ್ಷಕ್ಕೆ ಆರ್‌ಸಿಬಿ ಸೇರ್ಪಡೆಯಾಗಿದ್ದಾರೆ.

ADVERTISEMENT

ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್‌ರೈಡರ್ಸ್ ತಂಡವು ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ರೋವ್ಮನ್ ಪೊವೆಲ್ ಬದಲು ಮಧ್ಯಪ್ರದೇಶದ ಲೆಗ್‌ ಸ್ಪಿನ್ನರ್ ಶಿವಂ ಶುಕ್ಲಾ ಅವರಿಗೆ ಅವಕಾಶ ನೀಡಿದೆ. ಪೊವೆಲ್ ಅವರು ಟಾನ್ಸಿಲ್‌ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ₹30 ಲಕ್ಷಕ್ಕೆ ಶುಕ್ಲಾ ಅವರು ಅಜಿಂಕ್ಯ ರಹಾನೆ ಪಡೆಗೆ ಸೇರ್ಪಡೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.