ADVERTISEMENT

ಕೆ.ಎಲ್‌.ರಾಹುಲ್ 12ನೇ ಕ್ರಮಾಂಕದಲ್ಲಿಯೂ ಶತಕ ಗಳಿಸಬಲ್ಲ: ಶಿಖರ್ ಧವನ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 12:16 IST
Last Updated 12 ಫೆಬ್ರುವರಿ 2020, 12:16 IST
   
""

ನವದೆಹಲಿ:ಭಾರತ ತಂಡದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ 12ನೇ ಕ್ರಮಾಂಕದಲ್ಲಿ ಬೇಕಾದರೂ ಶತಕ ಗಳಿಸಬಲ್ಲಎಂದು ಆರಂಭಿಕ ಬ್ಯಾಟ್ಸ್‌ಮನ್ ಶಿಖರ್‌ ಧವನ್‌ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 112 ರನ್‌ ಗಳಿಸಿದ್ದ ರಾಹುಲ್‌, ಭಾರತ ಸವಾಲಿನ ಮೊತ್ತ ಕಲೆಹಾಕಲು ನೆರವಾಗಿದ್ದರು. ಈ ಶತಕದೊಂದಿಗೆ ಅವರು 1999ರ ಬಳಿಕ ಏಷ್ಯಾದಿಂದ ಹೊರಗೆ ಆಡಿದ ಪಂದ್ಯಗಳಲ್ಲಿ ಶತಕ ಗಳಿಸಿದ ಭಾರತದ ವಿಕೆಟ್‌ ಕೀಪರ್‌ ಎನಿಸಿದ್ದರು.

‘ತುಂಬಾ ಚೆನ್ನಾಗಿ ಆಡಿದ್ದೀಯ. ಅಮೋಘ ಶತಕ ಸೋದರ. ಹೀಗೆಯೇ ಬ್ಯಾಟಿಂಗ್ ಮುಂದುವರಿಸು. ನೀನು ಬ್ಯಾಟಿಂಗ್ ಮಾಡುವ ರೀತಿ ನೋಡಿದರೆ, ನೀನು 12ನೇ ಬ್ಯಾಟ್ಸ್‌ಮನ್‌ ಆಗಿ ಆಡಿದರೂ ಶತಕ ಬಾರಿಸಬಲ್ಲೆ’ ಎಂದು ಇನ್ಸ್‌ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಕೆಲವೇ ದಿನಗಳ ಹಿಂದೆ ಉಪನಾಯಕ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಲುರಾಹುಲ್‌ ಮತ್ತು ಧವನ್‌ ನಡುವೆಪೈಪೋಟಿ ಇತ್ತು. ಬಳಿಕ ವಿಕೆಟ್‌ ಕೀಪರ್ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡ ರಾಹುಲ್‌, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದರು.

ಆಸ್ಟ್ರೇಲಿಯಾ ವಿರುದ್ಧದ ಸರಣಿ ಸಂದರ್ಭದಲ್ಲಿ ಗಾಯಗೊಂಡಿರುವ ಧವನ್‌ತಂಡದಿಂದ ಹೊರಗುಳಿದಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದ ರಾಹುಲ್‌ಐದು ಪಂದ್ಯಗಳಿಂದ 224 ರನ್‌ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿಐದನೇ ಕ್ರಮಾಂಕದಲ್ಲಿ ಆಡಿ 204 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.