ADVERTISEMENT

ಕೆಪಿಎಲ್ ಬೆಟ್ಟಿಂಗ್: ಇಬ್ಬರು ಬುಕ್ಕಿಗಳ ವಿರುದ್ಧ ಎಫ್ಐಆರ್

ಬೌಲರ್‌ಗಳಿಗೆ ಪ್ರತಿ ಓವರ್‌ಗೆ 10ಕ್ಕೂ ಹೆಚ್ಚು ರನ್‌ ನೀಡುವಂತೆ ಹಣದ ಆಮಿಷ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 5:33 IST
Last Updated 2 ಅಕ್ಟೋಬರ್ 2019, 5:33 IST
   

ಬೆಂಗಳೂರು:ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಾವಳಿ ವೇಳೆ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಇಬ್ಬರು ಬುಕ್ಕಿಗಳ ವಿರುದ್ಧ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ ಆರೋಪದಲ್ಲಿ ಭಾವೇಶ್ ಭಾಫ್ನಾ ಮತ್ಯು ಸನ್ಯಾಮ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದರು.

ಭಾವೇಶ್‌ನನ್ನು ಈಗಾಗಲೇ ಬಂಧಿಸಲಾಗಿದೆ. ಸನ್ಯಾಮ್ ಎಂಬಾತ ದಿಲ್ಲಿಯಲ್ಲಿರುವ ಮಾಹಿತಿ ಸಿಕ್ಕಿದೆ. ಸದ್ಯದಲ್ಲೇ ಬಂಧಿಸಲಾಗುವುದು ಎಂದೂ ಅವರು ಹೇಳಿದರು.

ಬಳ್ಳಾರಿ ಟಸ್ಕರ್ ತಂಡದ ಬೌಲರ್‌ಗಳನ್ನು ಸಂಪರ್ಕಿಸಿದ್ದ ಈ ಇಬ್ಬರು ಆರೋಪಿಗಳು, ಪ್ರತಿ ಓವರ್‌ಗೆ10ಕ್ಕೂ ಹೆಚ್ಚು ರನ್‌ ನೀಡಿದರೆಹಣ ನೀಡುವ ಆಮಿಷ ಒಡ್ಡಿದ್ದರು. ಆದರೆ ಬೌಲರ್‌ಗಳು ಈ ಆಮಿಷವನ್ನು ನಿರಾಕರಿಸಿದ್ದರು ಎಂದೂ ಅಧಿಕಾರಿಗಳು ತಿಳಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.