ಕುಲದೀಪ್ ಯಾದವ್
ಬೆಕೆನ್‌ಹ್ಯಾಮ್: ಇಂಗ್ಲೆಂಡ್‌ನಲ್ಲಿರುವ ಪಿಚ್‌ಗಳು ಸ್ಪಿನ್ ಬೌಲರ್‌ಗಳಿಗೆ ನೆರವಾಗುವಂತೆ ಕಾಣುತ್ತಿವೆ. ಬ್ಯಾಟರ್‌ಗಳಿಗೂ ಅನುಕೂಲಕರವಾಗುವಂತಿವೆ ಎಂದು ಭಾರತ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದರು.
ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಭಾರತ ಎ ತಂಡಗಳ ನಡುವಣ ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಪಂದ್ಯದ ಮೊದಲ ದಿನ ತೇವಾಂಶ ಜಾಸ್ತಿ ಇದ್ದು ವೇಗಿಗಳಿಗೆ ಹೆಚ್ಚು ನೆರವಾಗಬಹುದು. ಆಟ ಮುಂದುವರಿದಂತೆ ಸ್ಪಿನ್ನರ್‌ಗಳಿಗೆ ಹೆಚ್ಚು ಉಪಯುಕ್ತವಾಗುವ ಸಾಧ್ಯತೆ ಹೆಚ್ಚಿದೆ’ ಎಂದು ಹೇಳಿದರು.
‘ಇವತ್ತು ಪಂದ್ಯದ ಮೂರನೇ ದಿನವಾಗಿದೆ. ಈ ಪಿಚ್‌ನಲ್ಲಿ ಸ್ಪಿನ್ ಎಸೆತಗಳು ಬೌನ್ಸ್ ಆಗುತ್ತಿವೆ. ಚೆಂಡು ಸ್ವಲ್ಪ ತಿರುಗುತ್ತಿದೆ’ ಎಂದು ವಿವರಿಸಿದರು.
‘ರವೀಂದ್ರ ಜಡೇಜ ಅವರ ಜೊತೆಗೂಡಿ ಆಡುತ್ತಿರುವುದು ನನಗೆ ಗೌರವದ ಸಂಗತಿ. ಜಡೇಜ ಮತ್ತು ಅಶ್ವಿನ್ ಅವರು ಭಾರತ ತಂಡಕ್ಕೆ ನೀಡಿರುವ ಕಾಣಿಕೆ ದೊಡ್ಡದು. ನಾನು ಪದಾರ್ಪಣೆ ಮಾಡಿದಾಗ ಅವರು ಬಹಳ ಉತ್ತಮ ಮಾರ್ಗದರ್ಶನ ನೀಡಿದ್ದರು. ಜಡ್ಡು (ಜಡೇಜ) ಜೊತೆಗೆ ನಾನು ಪ್ರತಿದಿನವೂ ಆಟದ ಕುರಿತು ಮಾತನಾಡುತ್ತೇನೆ. ಅವರ ಅನುಭವದ ನುಡಿಗಳು ಬಹಳ ಉಪಯುಕ್ತವಾಗಿವೆ’ ಎಂದು ಕುಲದೀಪ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.