ADVERTISEMENT

ಮಹಾರಾಜ ಟ್ರೋಫಿ: ಕಾರ್ತಿಕ್ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 21:30 IST
Last Updated 31 ಆಗಸ್ಟ್ 2024, 21:30 IST
<div class="paragraphs"><p>ಕ್ರಿಕೆಟ್ (ಸಾಂಕೇತಿಕ ಚಿತ್ರ)</p></div>

ಕ್ರಿಕೆಟ್ (ಸಾಂಕೇತಿಕ ಚಿತ್ರ)

   

ಬೆಂಗಳೂರು: ಅರ್ಧಶತಕ ಗಳಿಸಿದ ಎಸ್‌.ಯು. ಕಾರ್ತಿಕ್ ಅವರ ಬಲದಿಂದ ಮೈಸೂರು ವಾರಿಯರ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಹೋರಾಟದ ಮೊತ್ತ ಗಳಿಸಿತು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೈಸೂರು ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 177 ರನ್ ಗಳಿಸಿತು. 

ADVERTISEMENT

ಹುಬ್ಬಳ್ಳಿ  ತಂಡದ ವೇಗಿಗಳಾದ ವಿದ್ವತ್ ಕಾವೇರಪ್ಪ ಮತ್ತು ಎಲ್‌. ಆರ್. ಕುಮಾರ್ ಅವರಿಬ್ಬರ ದಾಳಿಯಿಂದಾಗಿ ಮೈಸೂರು ತಂಡವು ಆರಂಭಿಕ ಆಘಾತ ಅನುಭವಿಸಿತು. 14 ರನ್‌ಗಳಾಗುವಷ್ಟರಲ್ಲಿ ಕಾರ್ತಿಕ್ ಮತ್ತು ಕರುಣ್ ನಾಯರ್ ಅವರು ಔಟಾದರು. ಈ ಹಂತದಲ್ಲಿ ಎಸ್‌.ಯು. ಕಾರ್ತಿಕ್ (53; 43ಎ, 4X4, 6X2) ಮತ್ತು ಶರತ್ ಶ್ರೀನಿವಾಸ್ (26; 26ಎ) 61 ರನ್ ಸೇರಿಸಿದರು. ತಂಡದ ಮೊತ್ತವು ಮೂರಂಕಿ ಮುಟ್ಟುವ ಮುನ್ನವೇ ಈ ಜೊತೆಯಾಟವೂ ಮುರಿಯಿತು. 

ಆದರೆ ಕೆಳಕ್ರಮಾಂಕದಲ್ಲಿ ಮನೋಜ್ ಭಾಂಡಗೆ, ಹರ್ಷಿಲ್ ಧಮಾನಿ ಮತ್ತು ವಿದ್ಯಾಧರ್ ಪಾಟೀಲ (11 ರನ್) ಅವರು  ಕಾಣಿಕೆ ನೀಡಿದ್ದರಿಂದ ಮೊತ್ತವು ಹೆಚ್ಚಿತು.

ಸಂಕ್ಷಿಪ್ತ ಸ್ಕೋರು: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 177 (ಎಸ್‌.ಯು. ಕಾರ್ತಿಕ್ 53, ಶರತ್ ಶ್ರೀನಿವಾಸ್ 26, ಸುಮಿತ್ ಕುಮಾರ್ 18, ಮನೋಜ್ ಭಾಂಡಗೆ 26, ಹರ್ಷಿಲ್ ಧಮಾನಿ 14, ಎಲ್‌.ಆರ್. ಕುಮಾರ್ 37ಕ್ಕೆ3, ವಿದ್ವತ್ ಕಾವೇರಪ್ಪ 40ಕ್ಕೆ2) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.